Sandalwood
`ರಿಷಭ್ ಶೆಟ್ಟಿ ಸೆಟ್ನಲ್ಲಿ ಪಾದರಸದಂತೆ ಕೆಲಸ ಮಾಡುತ್ತಿದ್ದರು’ : ನಟ ಜಯರಾಮ್ ಮೆಚ್ಚುಗೆ
`ಕಾಂತಾರ 1 ಚಿತ್ರದಲ್ಲಿ ರಾಜ ರಾಜಶೇಖರನ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ಜಯರಾಮ್ ನಿರ್ದೇಶಕ ರಿಷಭ್ ಶೆಟ್ಟಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ತಮ್ಮ ತಮಿಳು ಚಿತ್ರದ ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಿಷಭ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ನೆನಪಿಸಿಕೊಂಡರು.
ರಿಷಭ್ ಸಿನಿಮಾ ನಿರ್ಮಾಣದ ಪ್ರತಿಯೊಂದು ಅಂಶದಲ್ಲೂ ತೊಡಗಿಸಿಕೊಂಡಿದ್ದರು. ಅವರು ಸೆಟ್ನಲ್ಲಿ ಪಾದರಸದಂತೆ ಕೆಲಸ ಮಾಡುತ್ತಿದ್ದರು. ಸೆಟ್ ನಿರ್ಮಾಣ, ಮೇಕಪ್, ಕ್ಯಾಮೆರಾ, ಆಕ್ಷನ್ ಸೇರಿದಂತೆ ಪ್ರತಿಯೊಂದು ವಿಭಾಗದ ಮೇಲ್ವಿಚಾರಣೆಯನ್ನೂ ಅವರು ಮಾಡುತ್ತಿದ್ದರು, ಮುತುವರ್ಜಿ ವಹಿಸುತ್ತಿದ್ದರು ಎಂದು ಜಯರಾಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂತಾರ: ಅಧ್ಯಾಯ 1 ರಲ್ಲಿ ಜಯರಾಮ್ ಪ್ರಮುಖ ಪಾತ್ರದಲ್ಲಿ, ನಟಿ ರುಕ್ಮಿಣಿ ವಸಂತ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದರು. ಇದಕ್ಕೂ ಮುನ್ನ ಶಿವರಾಜ್ಕುಮಾರ್ ಅವರ `ಘೋಸ್ಟ್’ ಸಿನಿಮಾದಲ್ಲಿ ಇವರು ನಟಿಸಿದ್ದರು.



