ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಅವರಿಗೆ ಕಿಚ್ಚ ಸುದೀಪ್ ವಿಶೇಷ ಗಿಫ್ಟ್
ಜಪಾನ್ ಓಪನ್ ಬಿಡಬ್ಲ್ಯುಎಫ್ ಸೂಪರ್ ಸಿರೀಸ್ ಪ್ರಶಸ್ತಿ ಗೆಲ್ಲುವ ಮೂಲಕ ಸಾಧನೆ ಮಾಡಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಅವರಿಗೆ ಕಿಚ್ಚ ಸುದೀಪ್ ಅವರು ವಿಶೇಷ ಉಡುಗೊರೆ ನೀಡಿ ಅಭಿನಂದಿಸಿದ್ದಾರೆ.
ಈ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಜಯಗಳಿಸುವ ಮೂಲಕ ಪಿವಿ ಸಿಂಧು ಅವರು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಜಯಿಸಿದ ಭಾರತದ ಮೊದಲ ಷಟ್ಲರ್ ಎನಿಸಿಕೊಂಡಿದ್ದಾರೆ. ಹೀಗಾಗಿ ಪಿವಿ ಸಿಂಧು ಅವರನ್ನು ಅಭಿನಂದಿಸಿರುವ ಕಿಚ್ಚ ಸುದೀಪ್ ಅವರು ಗಿಫ್ಟ್ ಜೊತೆಗೆ ತಮ್ಮ ಹೆಸರು ಇರುವ ಲೆಟರ್‍ಹೆಡ್‍ನಲ್ಲಿ ಅಭಿನಂದನಾ ಪತ್ರವನ್ನೂ ಕಳುಹಿಸಿದ್ದಾರೆ.
`ನಮ್ಮ ಪ್ರೀತಿಯ ದೇಶವನ್ನು ಮತ್ತೊಮ್ಮೆ ವಿಶ್ವ ಭೂಪಟದಲ್ಲಿ ಎತ್ತಿ ಹಿಡಿದಿದ್ದಕ್ಕಾಗಿ ಪ್ರತಿಯೊಬ್ಬರು ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು. ನೀವು ಸದಾ ನಮಗೆ ಪ್ರೇರಣೆಯಾಗಿದ್ದೀರಿ’ ಎಂದು ಸುದೀಪ್ ಬರೆದಿದ್ದಾರೆ. ಈ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪಿವಿ ಸಿಂಧು ಅವರು ಹಂಚಿಕೊಂಡಿದ್ದು, ಸುದೀಪ್ ಅವರಿಗೆ ಧನ್ಯವಾದ ಹೇಳಿದ್ದಾರೆ.



