Special Desk
ಇಲ್ಲಿವೆ ಬೃಹತ್ ಶಿಲಾಯುಗದ ಕಾಲದ ಸಮಾಧಿಗಳು…!
ಇದು ಇತಿಹಾಸಪೂರ್ವ ಯುಗದ ಕಾಲಕ್ಕೆ ಸಾಕ್ಷಿಯಾದ ತಾಣ. ಇಲ್ಲಿದೆ ಇತಿಹಾಸಪೂರ್ವ ಮೆಗಾಲಿತ್ ಅಥವಾ ಬೃಹತ್ ಶಿಲಾಯುಗದ ಕಾಲದ ಸಮಾಧಿಗಳು…! ಈ ಸ್ಥಳ ಇರುವುದು ಕೇರಳದ ತ್ರಿಶೂರ್ ಜಿಲ್ಲೆಯ ಚೆರ್ಮನಂಗಾಡ್ ಎಂಬ ಹಳ್ಳಿಯಲ್ಲಿ. ಈ ಜಾಗವನ್ನು ಕೊಡಕಲ್ಲು ಪರಂಬು ಎಂದು ಕರೆಯಲಾಗುತ್ತದೆ. ಬಹಳ ಅಪರೂಪದ ತಾಣವಿದು. ಈ ಸಣ್ಣ ಪ್ರದೇಶದಲ್ಲಿ ಈ ಸಣ್ಣ ಪ್ರದೇಶದಲ್ಲಿ 69 ಮೆಗಾಲಿಥಿಕ್ ಸ್ಮಾರಕಗಳು ಕಾಣಸಿಗುತ್ತವೆ. ಈ ಸ್ಮಾರಕಗಳ ಕೊಡೆಯ ಆಕಾರವನ್ನು ಹೋಲುವ ಬೃಹತ್ ಕಲ್ಲುಗಳಿಂದ ಕೂಡಿದೆ. ಈ ಸಮಾಧಿಗಳ ಕಾಲಮಾನ ಸುಮಾರು ಕ್ರಿಸ್ತ ಪೂರ್ವ 2000 ಎಂದು ಅಂದಾಜಿಸಲಾಗಿದೆ.
ಭಾರತೀಯ ಪುರಾತತ್ವ ಇಲಾಖೆಯು ಇದನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಕೊಚ್ಚಿಯಿಂದ ಸುಮಾರು 110 ಕಿ.ಮೀ ದೂರದಲ್ಲಿ ಈ ತಾಣವಿದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇತಿಹಾಸದ ಅಧ್ಯಯನಕ್ಕೆ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಬೇಕೆಂಬ ಕುತೂಹಲಿಗೆ ಇದು ಆಸಕ್ತಿ ಹುಟ್ಟಿಸುವಂತಹ ತಾಣ ಕೂಡಾ ಹೌದು.



