Sandalwood

ಯಶ್ `ಟಾಕ್ಸಿಕ್’ ಟ್ರೇಲರ್ ಅನಾವರಣಕ್ಕೆ ಮುಹೂರ್ತ ಫಿಕ್ಸ್ : ಅಭಿಮಾನಿಗಳಲ್ಲಿ ಹರ್ಷ

ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ `ಟಾಕ್ಸಿಕ್’ ಸಿನಿಮಾದ ಕುರಿತು ಬಿಗ್ ಅಪ್‍ಡೇಟ್ ಸಿಕ್ಕಿದೆ. ಯಶ್ ಅಭಿಮಾನಿಗಳಿಗೆ ಖುಷಿ ನೀಡುವಂತಹ ಸುದ್ದಿಯನ್ನು ನಿರ್ದೇಶಕಿ ಗೀತು ಮೋಹನ್ ದಾಸ್ ನೀಡಿದ್ದಾರೆ. ಅದೇನೆಂದರೆ ಈಗ ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 8 ರಂದು ಟ್ರೇಲರ್ ಬಿಡುಗಡೆಯಾಗಲಿದೆ.

ಈ ಬಗ್ಗೆ ವಿವರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ನಿರ್ದೇಶಕಿ ಗೀತು ಮೋಹನ್ ದಾಸ್ ಹಂಚಿಕೊಂಡಿದ್ದಾರೆ. ಜೊತೆಗೆ ಈ ಚಿತ್ರ ಆಗಸ್ಟ್ 26 ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಲಿಸಲಿದೆ. ಈ ಪೋಸ್ಟ್‍ನೊಂದಿಗೆ ಗೀತು ಅವರು ಯಶ್ ಅವರ ಜಬರ್‍ದಸ್ತ್ ಫೋಟೋವನ್ನೂ ಹಂಚಿಕೊಂಡಿದ್ದಾರೆ.


ಟ್ರೇಲರ್ ಬೆಂಗಳೂರಿನಲ್ಲಿಯೇ ಬಿಡುಗಡೆಯಾಗಲಿದೆ. ಜೊತೆಗೆ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಆರಂಭವಾಗಿ ಆಗಸ್ಟ್ 8 ಕ್ಕೆ ಭರ್ತಿ ಎರಡು ವರ್ಷ ತುಂಬುತ್ತದೆ. ಹಾಲಿವುಡ್ ಮಟ್ಟದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಸಹಜವಾಗಿಯೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ALSO READ : ಶ್ರೀಕೃಷ್ಣ ದೇವರ ಕೊರಳಲ್ಲಿ ಹಾರವಾಯಿತು ನರಕಾಸುರನ ಪುತ್ರ ಪ್ರಯೋಗಿಸಿದ ಅಸ್ತ್ರ !

ಯಶ್ ನಟನೆಯ `ಟಾಕ್ಸಿಕ್’ ಸಿನಿಮಾದಲ್ಲಿ ನಯನತಾರಾ, ರುಕ್ಮಿಣಿ ವಸಂತ್, ಕಿಯಾರ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಸೇರಿದಂತೆ ಸಾಕಷ್ಟು ಕಲಾವಿದರು ಕಾಣಿಸಿಕೊಂಡಿದ್ದಾರೆ.

ALSO READ : ಅಭಿಮಾನಿ ಸಂಘಗಳ ಇಬ್ಬರು ಆಡಳಿತಾಧಿಕಾರಿಗಳ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡ ನಟ ಧನುಷ್

ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರ ರಾಮಾಯಣ ಸಿನಿಮಾವೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ಯಶ್ ರಾವಣನಾಗಿ ಅಬ್ಬರಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಕೂಡಾ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ALSO READ : ಸೈಬರ್ ವಂಚಕರಿಂದ 2.43 ಲಕ್ಷ ರೂಪಾಯಿ ಕಳೆದುಕೊಂಡ ಬಾಲಿವುಡ್ ನಟಿ!

Show More

Related Articles

Leave a Reply

Your email address will not be published. Required fields are marked *

Back to top button