Sandalwood

ಮೆಲ್ಬೋರ್ನ್‍ನಲ್ಲಿ ಪ್ರತಿಷ್ಠಿತ `ಲೀಡರ್‌ಶಿಪ್ ಇನ್ ಸಿನಿಮಾ’ ಪ್ರಶಸ್ತಿ ಸ್ವೀಕರಿಸಲಿರುವ ರಿಷಭ್ ಶೆಟ್ಟಿ

ಸ್ಯಾಂಡಲ್‍ವುಡ್‍ನ ಪ್ರಮುಖ ನಿರ್ದೇಶಕ ರಿಷಭ್ ಶೆಟ್ಟಿ 2026 ರ ಭಾರತೀಯ ಚಲನಚಿತ್ರೋತ್ಸವ ಮೆಲ್ಬೋರ್ನ್ (ಐಎಫ್‍ಎಫ್‍ಎಂ) ಆವೃತ್ತಿಯಲ್ಲಿ ಪ್ರತಿಷ್ಠಿತ ಲೀಡರ್‍ಶಿಪ್ ಇನ್ ಸಿನಿಮಾ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ನಟ, ಬರಹಗಾರ, ನಿರ್ದೇಶಕ, ನಿರ್ಮಾಪಕರಾಗಿ ಇವರು ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಲೀಡರ್‍ಶಿಪ್ ಇನ್ ಸಿನಿಮಾ ಪ್ರಶಸ್ತಿಯು ಉತ್ಸವದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ

ಕಾಂತಾರ ಸರಣಿಯ ಮೂಲಕ ರಿಷಭ್ ದೇಶದ ಅತ್ಯಂತ ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಇವರು ನಿರ್ಮಾಪಕರಾಗಿಯೂ ಹಲವು ಪ್ರಮುಖ ಸಿನಿಮಾಗಳನ್ನು ಸಿನಿಜಗತ್ತಿಗೆ ನೀಡಿದ್ದಾರೆ.

2026ರ ಆಗಸ್ಟ್ 13 ರಿಂದ 23ರ ತನಕ ಈ ಚಲನಚಿತ್ರೋತ್ಸವ ನಡೆಯಲಿದೆ.

Show More

Related Articles

Leave a Reply

Your email address will not be published. Required fields are marked *

Back to top button