Sandalwood

ತನ್ನ ಸಿನಿಮಾದ ಪ್ರಚಾರಕ್ಕೆ ಪಾಂಪ್ಲೆಂಟ್ ಹಂಚಿದ್ದ ಯಶ್ : `ರಾಕಿಂಗ್ ಸ್ಟಾರ್’ ಪಟ್ಟದ ಹಿಂದಿನ ಶ್ರಮವಿದು

2010ರಲ್ಲಿ ಯಶ್ ಅಭಿನಯಿಸಿದ ಸಿನಿಮಾ `ಮೊದಲಾ ಸಲ'. ಪುರುಷೋತ್ತಮ್ ಸಿ ನಿರ್ದೇಶನದ ಈ ಚಿತ್ರದ ಪ್ರಚಾರದಲ್ಲಿ ಯಶ್ ಕೂಡಾ ಭಾಗಿದ್ದರು. ಬಸ್ ಹತ್ತಿ ಪಾಂಪ್ಲೆಂಟ್ ಹಂಚಿದ್ದರು. ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದೆ.

ಯಶ್… ಈ ಹೆಸರು ಈಗ ಬಲು ಪ್ರಸಿದ್ಧ. ದೇಶ ವಿದೇಶದಲ್ಲೂ ರಾಕಿಂಗ್ ಸ್ಟಾರ್ ಅಭಿಮಾನಿಗಳಿದ್ದಾರೆ. ಯಶ್ ಗಳಿಸಿರುವ ಹೆಸರು ಅಂತಹದ್ದು… ಕನ್ನಡದ ಹುಡುಗನ ಈ ಸಾಧನೆಯನ್ನು ಕೊಂಡಾಡದವರೇ ಇಲ್ಲ. ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಯಶ್ ಈಗ ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ಇವರ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಈಗಾಗಲೇ ಗಮನ ಸೆಳೆದಿದೆ.

ಇಂತಹ ಯಶ್ ಸಾಗಿ ಬಂದ ಹಾದಿಯೇನೂ ಅದು ಹೂವಿನ ಮೆತ್ತೆಯಾಗಿರಲಿಲ್ಲ. ಅವರು ಸವೆಸಿದ್ದು ಕಷ್ಟದ ಹಾದಿ. ಈಗ ಅಭಿಮಾನಿ ಬಳಗ, ಕೀರ್ತಿಯನ್ನು ಗಳಿಸಿರುವ ಯಶ್ ಕಷ್ಟದ ದಿನಗಳನ್ನು ನೋಡಿಯೇ ಈ ಹಂತಕ್ಕೆ ಬಂದವರು. ಅಂತೆಯೇ ಈಗ ಯಶ್ ಅವರ ಹಳೆಯ ಫೋಟೋವೊಂದು ವೈರಲ್ ಆಗುತ್ತಿದೆ. ಇದು ಯಶ್ ಅವರು ತಮ್ಮ ಚಿತ್ರದ ಪ್ರಚಾರ ನಡೆಸಿದ್ದ ಫೋಟೋ. `ಜಂಬದ ಹುಡುಗಿ’ ಯಶ್ ಅವರ ಮೊದಲ ಚಿತ್ರ. ಆದರೆ ಇವರು ಯಶಸ್ಸು ಕಂಡ ಮೊದಲ ಸಿನಿಮಾ `ಮೊಗ್ಗಿನ ಮನಸ್ಸು’. 2010ರಲ್ಲಿ ಯಶ್ ಅಭಿನಯಿಸಿದ ಸಿನಿಮಾ `ಮೊದಲಾ ಸಲ’. ಪುರುಷೋತ್ತಮ್ ಸಿ ನಿರ್ದೇಶನದ ಈ ಚಿತ್ರದ ಪ್ರಚಾರದಲ್ಲಿ ಯಶ್ ಕೂಡಾ ಭಾಗಿದ್ದರು. ಬಸ್ ಹತ್ತಿ ಪಾಂಪ್ಲೆಂಟ್ ಹಂಚಿದ್ದರು. ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದೆ.


ಹೀಗಿದ್ದ ಯಶ್ ಈಗ ಸಾಧನೆಯ ಶಿಖರವನ್ನೇರಿದ್ದಾರೆ. ಈ ಕೀರ್ತಿಯ ಹಿಂದೆ ಯಶ್ ಕಳೆದ ಸಾಕಷ್ಟು ಕಷ್ಟಗಳ ದಿನವೂ, ಶ್ರಮವೂ ಇದೆ…

Show More

Related Articles

Leave a Reply

Your email address will not be published. Required fields are marked *

Back to top button