Sandalwood
`ಬಿಂದಾಸ್’ ಬೆಡಗಿ ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನ ಅಂತ್ಯ
ಮುಂಬೈ : ಸ್ಯಾಂಡಲ್ವುಡ್ನ `ಬಿಂದಾಸ್’ ಚಿತ್ರ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನ ಅಂತ್ಯವಾಗಿದೆ. ಉದ್ಯಮಿ ಸೊಹೇಲ್ ಖುತುರಿಯಾ ಅವರೊಂದಿಗಿನ ದಾಂಪತ್ಯ ಈಗ ಅಧಿಕೃತವಾಗಿ ಕೊನೆಯಾಗಿದೆ. ಹನ್ಸಿಕಾ ಹಾಗೂ ಸೊಹೇಲ್ ಅವರಿಗೆ ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ.
ಪರಸ್ಪರ ಒಪ್ಪಿಗೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹನ್ಸಿಕಾ ಯಾವುದೇ ಜೀವನಾಂಶವನ್ನು ಕೇಳಿಲ್ಲ. ಈಗ ಅವರು ತಮ್ಮ ವೈಯಕ್ತಿಕ ಜೀವನ ಮತ್ತು ಸಿನಿಮಾಗಳತ್ತ ಗಮನಹರಿಸಲು ಬಯಸುತ್ತಿದ್ದಾರೆ ಎಂದು ಹನ್ಸಿಕಾ ಪರ ವಕೀಲರು ಹೇಳಿದ್ದಾರೆ.
2022 ಡಿಸೆಂಬರ್ನಲ್ಲಿ ಜೈಪುರದ ಸುಂದರ ಮುಂಡೋಟಾ ಫೆÇೀರ್ಟ್ನಲ್ಲಿ ಇವರ ಮದುವೆ ಸಂಭ್ರಮದಿಂದ ಜರುಗಿತ್ತು. 2008ರಲ್ಲಿ ಬಿಡುಗಡೆಯಾಗಿದ್ದ ಬಿಂದಾಸ್ ಚಿತ್ರದಲ್ಲಿ ಹನ್ಸಿಕಾ ದಿವಂಗತ ಪುನೀತ್ ರಾಜ್ಕುಮಾರ್ ಅವರಿಗೆ ನಾಯಕಿಯಾಗಿ ನಟಿಸಿದ್ದರು.



