Sandalwood
ಭೂತಾನ್ನಲ್ಲಿ ಟ್ರೆಕ್ಕಿಂಗ್ : ಚಾರಣದ ಅನುಭವಗಳನ್ನು ಹಂಚಿಕೊಂಡ ನಟಿ ಮೇಘನಾ ಗಾಂವ್ಕರ್
ಸ್ಯಾಂಡಲ್ವುಡ್ ನಟಿ ಮೇಘನಾ ಗಾಂವ್ಕರ್ ಭೂತಾನ್ನಲ್ಲಿ ತಾವು ಕೈಗೊಂಡ ಚಾರಣದ ಅನುಭವವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಠಿಣವಾದ ಟೈಗರ್ ನೆಸ್ಟ್ ಮಠಕ್ಕೆ ಇವರು ಕೈಗೊಂಡ ಚಾರಣದ ಬಗ್ಗೆ ಮೇಘನಾ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕಠಿಣ ಚಾರಣಗಳಲ್ಲಿ ಒಂದಾದ ಈ ಬೆಟ್ಟ ಹತ್ತಿ ಇಳಿಯಲು ಏಳು ಗಂಟೆ ಬೇಕಾಗಿತ್ತು ಎಂದು ಇವರು ಹೇಳಿಕೊಂಡಿದ್ದಾರೆ.
ಹೀಗೆ ಸಾಗಿದ ಬಳಿಕ ಸುಂದರ ಪ್ರಕೃತಿಯ ನಡುವೆ ಇರುವ ಮಠದ ಒಳಗೆ ಹೋದಾಗ ಆದ ಅನುಭವ ಅನನ್ಯ ಎಂದೂ ಇವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಚಾರಣವು ವೈಯಕ್ತಿಕ ಮತ್ತು ಆಧ್ಯಾತ್ಮಿಕವಾಗಿತ್ತು. ಈ ನಾನು ಈ ಚಾರಣ ಮಾಡಿದ್ದೇನೆ ಎಂದು ನನಗೆ ತುಂಬಾ ಹೆಮ್ಮೆಯಿದೆ ಎಂದು ಇವರು ಬರೆದುಕೊಂಡಿದ್ದಾರೆ.



