Sandalwood

ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀನಿಧಿ ಶೆಟ್ಟಿ, ಆಶಾ ಭಟ್ : ಹಳೇ ದಿನಗಳನ್ನು ಮೆಲುಕು ಹಾಕಿದ ಸ್ನೇಹಿತೆಯರು

ಕೆಜಿಎಫ್ ಖ್ಯಾತಿ ಶ್ರೀನಿಧಿ ಶೆಟ್ಟಿ ಹಾಗೂ ರಾಬರ್ಟ್ ಸಿನಿಮಾದ ನಾಯಕಿ ಆಶಾ ಭಟ್ ತಮ್ಮ ಸ್ನೇಹಿತೆಯರ ಜೊತೆಗೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ಗೆಳೆತನದ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

 

View this post on Instagram

 

A post shared by Asha Bhat (@asha.bhat)

ಈ ಬಗ್ಗೆ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಆಶಾ ಭಟ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. `‘ನಾವು ಬೆಳೆದು ದೊಡ್ಡವರಾದರೂ, ಸ್ನೇಹಿತರ ಅಥವಾ ಇಷ್ಟಪಾತ್ರರ ಜೊತೆಯಲ್ಲಿ ನಮ್ಮ ಹಳೆಯ ನೆನಪುಗಳಿರುವ ಜಾಗಕ್ಕೆ ಮತ್ತೆ ಭೇಟಿ ನೀಡಿದಾಗ ಸಿಗುವ ಆನಂದದ ಬಗ್ಗೆ ವಿವರಿಸಲು ಸಾಧ್ಯವಿಲ್ಲ. ಮಿಸ್ ಇಂಡಿಯಾ ಸ್ಪರ್ಧೆಯ ದಿನಗಳಿಂದ ನೋಯೋನಿತಾ ಲೋಧ್, ವರ್ತಿಕಾ ಸಿಂಗ್, ಶ್ರೀನಿಧಿ ಶೆಟ್ಟಿ ಪರಿಚಯ ಆಗಿ ಸ್ನೇಹಿತರಾಗಿದ್ದೇವೆ. ಇದೀಗ ಮತ್ತೆ ನಾವು ಇಷ್ಟು ಜನ ಜೊತೆಯಾಗಿ ಸಿದ್ಧಿವಿನಾಯಕ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇವೆ’ ಎಂದು ಆಶಾ ಭಟ್ ತಮ್ಮ ಪೋಸ್ಟ್‍ನಲ್ಲಿ ಹಂಚಿಕೊಂಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button