ಮತ್ತೆ ಕನ್ನಡಕ್ಕೆ ನಟಿ ಊರ್ವಶಿ : `ಬುಲ್ಲಿ’ ಚಿತ್ರದ ಮೂಲಕ ಊರ್ವಶಿ ಪುತ್ರಿಯೂ ಕನ್ನಡಕ್ಕೆ ಪದಾರ್ಪಣೆ
ಐದು ಭಾಷೆಗಳಲ್ಲಿ 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಊರ್ವಶಿ ಬಹಳಷ್ಟು ವರ್ಷಗಳ ಅಂತರದ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಸೂಪರ್ ಹಿಟ್ `ರಾಮಾ ಶಾಮ ಭಾಮಾ’ ಸಿನಿಮಾದ ಬಳಿಕ ಊರ್ವಶಿ ಬುಲ್ಲಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದಾರೆ.
ಅನೂಪ್ ಆಂಟನಿ ನಿರ್ದೇಶನದ ಡಾರ್ಕ್ ಕಾಮಿಡಿ ಬುಲ್ಲಿ ಚಿತ್ರದಲ್ಲಿ ಊರ್ವಶಿ ನಟಿಸುತ್ತಿದ್ದಾರೆ. ಬರೀ ಅಷ್ಟೇ ಅಲ್ಲ ಈ ಚಿತ್ರದ ಮೂಲಕ ಊರ್ವಶಿ ಅವರ ಪುತ್ರಿ ತೇಜ ಲಕ್ಷ್ಮಿ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ತೇಜ ಲಕ್ಷ್ಮಿ ಭುವನ್ ಪೊನ್ನಣ್ಣ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. `ನನ್ನ ಪುತ್ರಿಯ ಕನ್ನಡ ಪಯಣವು ಬುಲ್ಲಿಯೊಂದಿಗೆ ಆರಂಭವಾಗುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ’ ಎಂದು ಚಿತ್ರದ ಟೈಟಲ್ ಬಿಡುಗಡೆ ಸಮಾರಂಭದಲ್ಲಿ ಊರ್ವಶಿ ಹೇಳಿದ್ದಾರೆ.
View this post on Instagram
ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದ ಊರ್ವಶಿ ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್, ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಸೇರಿದಂತೆ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.



