ಗಾಯದಿಂದ ವಿಶ್ರಾಂತಿ : ಇನ್‍ಸ್ಟ್ರಾಗ್ರಾಂ ಮೆಸೇಜ್ ಮೂಲಕ ಆರೋಗ್ಯ ಸ್ಥಿತಿಯ ಬಗ್ಗೆ ಹಂಚಿಕೊಂಡ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ `ಮೈಸಾ’ ಚಿತ್ರದ ನೃತ್ಯದ ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಇವರ ಸೊಂಟದ ಭಾಗಕ್ಕೆ ತೀವ್ರ ಏಟಾಗಿತ್ತು. ಹೀಗಾಗಿ ಆರು ವಾರಗಳ ವಿಶ್ರಾಂತಿ ಪಡೆಯಲೇಬೇಕಾದ ಅನಿವಾರ್ಯತೆಯಲ್ಲಿ ರಶ್ಮಿಕಾ ಸಿಲುಕಿದ್ದಾರೆ. ರಶ್ಮಿಕಾಗೆ ಗಾಯವಾದ ಸುದ್ದಿ ತಿಳಿದ ತಕ್ಷಣ ಅವರ ಅಭಿಮಾನಿಗಳು ಶೀಘ್ರ ಚೇತರಿಕೆಗೆ ಹಾರೈಸುತ್ತಿದ್ದಾರೆ.
ಇದೀಗ, ಸ್ವತಃ ರಶ್ಮಿಕಾ ತಮ್ಮ ಇನ್‍ಸ್ಟಾಗ್ರಾಂ ಖಾತೆ ಮೂಲಕ ತನ್ನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ತಾನು ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
View this post on Instagram
ALSO READ : 800 ಮಿಲಿಯನ್‍ಗೂ ಅಧಿಕ ವೀಕ್ಷಣೆ ಗಳಿಸಿ ದಾಖಲೆ ಬರೆದ ರಾಮಾಯಣ ಟ್ರೇಲರ್
`ಇದು ನನಗೆ ಸತತವಾಗಿ ಆಗುತ್ತಿರುವ 3ನೇ ಗಾಯ. ನನ್ನ ದೇಹವನ್ನು ಕೇವಲ ಒಂದು ಯಂತ್ರದಂತೆ ನೋಡದೆ, ಅದನ್ನೂ ಒಬ್ಬ ಮನುಷ್ಯನ ದೇಹದಂತೆ ನೋಡಿಕೊಳ್ಳುವುದನ್ನು ನಾನು ಕಲಿಯಬೇಕು’ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ. ಬಲಗಡೆಯ ಸೊಂಟದ ಸ್ನಾಯು ತುಂಡಾಗಿದ್ದು, ಕಾಲನ್ನು ಎತ್ತಲು ಆಗುತ್ತಿಲ್ಲ ಎಂದೂ ರಶ್ಮಿಕಾ ತಿಳಿಸಿದ್ದಾರೆ. ನಾನು ವಿಶ್ರಾಂತಿ ತೆಗೆದುಕೊಳ್ಳುತ್ತಿಲ್ಲ ಎಂದು ದೇವರೇ ನೀಡಿರುವ ವಿರಾಮ ಇದು ಎಂದೆನಿಸುತ್ತಿದೆ ಎಂದೂ ರಶ್ಮಿಕಾ ಹೇಳಿಕೊಂಡಿದ್ದಾರೆ.
ALSO READ : ದುಬೈನಲ್ಲಿ ಐಷಾರಾಮಿ ವಿಹಾರ ನೌಕೆ ಖರೀದಿಸಿದ ನಟ ಆರ್ ಮಾಧವನ್



