Tollywood
ನಟಿ ರಶ್ಮಿಕಾ ಮಂದಣ್ಣರಿಗೆ ಗಾಯ : ಹಾಡಿನ ಶೂಟಿಂಗ್ ವೇಳೆ ಘಟನೆ : ವಿಶ್ರಾಂತಿಗೆ ವೈದ್ಯರ ಸೂಚನೆ
ಹೈದರಾಬಾದ್ : ನಟಿ ರಶ್ಮಿಕಾ ಮಂದಣ್ಣ ಈಗ ಹಲವು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಇದೀಗ ಶೂಟಿಂಗ್ ಸೆಟ್ನಲ್ಲಿ ರಶ್ಮಿಕಾ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದು, ಶೀಘ್ರ ಚೇತರಿಕೆಗೆ ಹಾರೈಸುತ್ತಿದ್ದಾರೆ.
Actress #RashmikaMandanna suffers a serious injury while filming a dance sequence 😢
Reports say she has a complete tendon detachment in the hip due to intense action and dance portions for #Ranabali & #Mysa. Doctors have advised 6 weeks complete rest along with rehabilitation.…
— Balaji (@RDBalaji) July 31, 2026
ನೃತ್ಯ ಚಿತ್ರೀಕರಣದ ಸಮಯದಲ್ಲಿ ರಶ್ಮಿಕಾ ಸೊಂಟಕ್ಕೆ ಗಾಯಗಳಾಗಿವೆ ಎಂದು ಹೇಳಲಾಗುತ್ತದೆ. ಸದ್ಯ ಇವರಿಗೆ ವೈದ್ಯರು ಆರು ವಾರಗಳ ಕಾಲ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ರಶ್ಮಿಕಾ ಮತ್ತು ಅವರ ತಂಡವು ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ರಶ್ಮಿಕಾ ಅವರ ಚೇತರಿಕೆಗೆ ಹಾರೈಸುತ್ತಿದ್ದಾರೆ.
ಪ್ರಸ್ತುತ ರಣಬಾಲಿ ಮತ್ತು ಮೈಸಾ ಸೇರಿದಂತೆ ಕೆಲವು ದೊಡ್ಡ ಬಜೆಟ್ ಚಿತ್ರಗಳಲ್ಲಿ ರಶ್ಮಿಕಾ ಕೆಲಸ ಮಾಡುತ್ತಿದ್ದಾರೆ.



