ಕಿಚ್ಚ ಸುದೀಪ್ ಅವರ 26 ವರ್ಷಗಳ ಹಳೆಯ ಅಪರೂಪದ ಫೋಟೋ ಹಂಚಿಕೊಂಡ ನಟಿ ಸಂಗೀತಾ
ಹಳೆಯ ಫೋಟೋಗಳು ಸಹಜವಾಗಿಯೇ ಸುಂದರ ನೆನಪುಗಳನ್ನು ಮತ್ತೆ ಕಣ್ಣೆದುರು ತರುತ್ತದೆ. ಇದೀಗ ಅಂತಹದ್ದೇ ಫೋಟೋವನ್ನು ನಟಿ ಸಂಗೀತಾ ಅನಿಲ್ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರೊಂದಿಗಿನ ಅಪರೂಪದ ಫೋಟೋ ಅದು. 26 ವರ್ಷ ಹಿಂದಿನ ಈ ಫೋಟೋವನ್ನು ಸಂಗೀತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ALSO READ : ಗಾಯದಿಂದ ವಿಶ್ರಾಂತಿ : ಇನ್ಸ್ಟ್ರಾಗ್ರಾಂ ಮೆಸೇಜ್ ಮೂಲಕ ಆರೋಗ್ಯ ಸ್ಥಿತಿಯ ಬಗ್ಗೆ ಹಂಚಿಕೊಂಡ ರಶ್ಮಿಕಾ ಮಂದಣ್ಣ
View this post on Instagram
ALSO READ : 800 ಮಿಲಿಯನ್ಗೂ ಅಧಿಕ ವೀಕ್ಷಣೆ ಗಳಿಸಿ ದಾಖಲೆ ಬರೆದ ರಾಮಾಯಣ ಟ್ರೇಲರ್
`ಇವರು ಯಾರೆಂದು ಊಹಿಸಿ. ನನ್ನ ಹಳೆಯ ಆಲ್ಬಮ್ ಫೋಟೋ ಗ್ಯಾಲರಿಯಲ್ಲಿ ಸಿಕ್ಕಿತು. ನನ್ನ ಒಂದು ಸೀರಿಯಲ್ನಲ್ಲಿ ನನ್ನ ನಾಯಕನಾಗಿದ್ದರು ಹಾಗೂ ಈಗ ಅವರು ಕನ್ನಡ ಇಂಡಸ್ಟ್ರಿಯ ಬಾದ್ಶಾ. ಇದು 26 ವರ್ಷದ ಹಳೆಯ ಚಿತ್ರ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳದೆ ಇರಲು ನನ್ನಿಂದ ಸಾಧ್ಯವಾಗಲಿಲ್ಲ ಮತ್ತು ನಮ್ಮ ಕಿಚ್ಚ ಸುದೀಪ್ ಬಗ್ಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ. ಸೀರಿಯಲ್ ಹೆಸರನ್ನು ಊಹಿಸಿ’ ಎಂದು ಸಂಗೀತಾ ಬರೆದುಕೊಂಡಿದ್ದಾರೆ.
ALSO READ : 1968ರ ಅಪರೂಪದ ಫೋಟೋ ಹಂಚಿಕೊಂಡ ನಟ ಶ್ರೀನಾಥ್
ಸದ್ಯ ಈ ಫೋಟೋ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.



