Sandalwood
ಗೆಳೆಯನ ಅಗಲಿಕೆಗೆ ಕನ್ನಡದಲ್ಲಿಯೇ ಸಂತಾಪ ಸೂಚಿಸಿದ ರಜನಿಕಾಂತ್
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಬಹುಕಾಲದ ಗೆಳೆಯನ ಅಗಲಿಕೆಗೆ ಕನ್ನಡದಲ್ಲಿಯೇ ಸಂತಾಪ ಸೂಚಿಸಿದ್ದಾರೆ. ಕನ್ನಡದ ಹಿರಿಯ ಸಿನಿಮಾ ವರದಿಗಾರ ಕೆ ಜೆ ಕುಮಾರ್ ಅವರ ಅಗಲಿಕೆ ರಜನಿಕಾಂತ್ ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
— Rajinikanth (@rajinikanth) March 12, 2026
`ದಿವಂಗತ ಕೆ.ಜೆ. ಕುಮಾರ್‌ರವರು ನನ್ನ ಆತ್ಮೀಯ ಸ್ನೇಹಿತರು. ಆರಂಭ ಕಾಲದಿಂದಲೂ ನನ್ನ ನಟನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದವರು. ಬಹಳ ಸರಳವಾಗಿ ಯಾವಾಗಲೂ ಹಸನ್ಮುಖಿಯಾಗಿ ಎಲ್ಲರ ಜೊತೆಯಲ್ಲಿದ್ದರು. ಅವರ ಅಗಲಿಕೆ ನನ್ನ ಮನಸ್ಸಿಗೆ ತುಂಬಾ ನೋವು ಉಂಟುಮಾಡಿದೆ. ಅವರ ಕುಟುಂಬಸ್ಥರಿಗೆ ನನ್ನ ಸಂತಾಪಗಳು.’ ಎಂದು ರಜನಿಕಾಂತ್ ಬರೆದುಕೊಂಡಿದ್ದಾರೆ.
ಮೈಸೂರಿನ ಯಾದವಗಿರಿಯ ನಿವಾಸಿ ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ಮಾರ್ಚ್ 11 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದರು.



