ಮತ್ತೆ ತೆರೆಗೆ ಬರುತ್ತಿದೆ ಅಪ್ಪು ಅಭಿನಯದ `ಆಕಾಶ್’
ಬೆಂಗಳೂರು : ಸ್ಯಾಂಡಲ್ವುಡ್ನ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ `ಆಕಾಶ್’ ಮತ್ತೆ ತೆರೆಗೆ ಬರುತ್ತಿದೆ. ಅಪ್ಪು ಅವರ ಜನ್ಮದಿನದ ನಿಮಿತ್ತ 21 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಆಕಾಶ್ ಸಿನಿಮಾ ನಾಳೆ (ಮಾರ್ಚ್ 13)ರಂದು ಮರು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ವಿಡಿಯೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Throwback to the 25-week celebrations of #Akash in 2005, when Kannada cinema legends came together to celebrate its success. 🌟#ಆಕಾಶ್ ಚಿತ್ರದ ಅಮೋಘ 25 ವಾರಗಳ ಯಶಸ್ಸಿನ ಸಂಭ್ರಮಾಚರಣೆಯನ್ನು ಹರ್ಷದಿಂದ ಹಾರೈಸಲು ಕನ್ನಡ ಚಿತ್ರರಂಗದ ಗಣ್ಯರು ಒಂದುಗೂಡಿದ ಅಪರೂಪದ ಕ್ಷಣಗಳು.
Dated : 19-11-2005
Venue : BR… pic.twitter.com/ytUPYZsQem— Ashwini Puneeth Rajkumar (@Ashwini_PRK) March 11, 2026
ಮಾರ್ಚ್ 17 ಅಪ್ಪು ಅವರ ಹುಟ್ಟುಹಬ್ಬ. ಹೀಗಾಗಿ ಆಕಾಶ್ ಚಿತ್ರವನ್ನು 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 2005ರಲ್ಲಿ ಬಿಡುಗಡೆಯಾದ ಈ ಸಿನಿಮಾ 25 ವಾರಗಳ ಕಾಲ ಪ್ರದರ್ಶನ ಕಂಡು ಗಮನ ಸೆಳೆದಿತ್ತು
ಈ ಸಿನಿಮಾದಲ್ಲಿ ರಮ್ಯಾ ಅವರು ಅಪ್ಪು ಅವರಿಗೆ ನಾಯಕಿಯಾಗಿದ್ದರು. ರಮ್ಯಾ ಕೂಡಾ ಈ ಮರುಬಿಡುಗಡೆ ಕುರಿತು ಸಂತಸ ವ್ಯಕ್ತಪಡಿಸಿ ವೀಡಿಯೋ ಹಂಚಿಕೊಂಡಿದ್ದಾರೆ.
A walk down memory lane, actress Ramya remembers the cherished moments of #Akash 💖
ನಟಿ ರಮ್ಯಾ ಅವರು ‘ಆಕಾಶ್’ ಚಿತ್ರದ ಅಮರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. 🥰▶️ #AkashReRelease in cinemas tomorrow.
🎟️ Book your tickets now.#DrPuneethRajkumar @divyaspandana
Directed by #MaheshBabu pic.twitter.com/mYWmwQeYQA— PRK Productions (@PRK_Productions) March 12, 2026



