Sandalwood

`ಟಾಕ್ಸಿಕ್’ಗೆ ಫೈಟ್ ನೀಡಲಿದೆಯಾ `ಧುರಂಧರ್ 3′? : ವೈರಲ್ ಪೋಸ್ಟ್‌ನ ಅಸಲೀಯತ್ತೇನು…?

ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಅಭಿನಯದ ಧುರಂಧರ್ ಸರಣಿ ಬಾಕ್ಸ್ ಆಫೀಸ್‍ನಲ್ಲಿ ಅಬ್ಬರಿಸುತ್ತಿದೆ. ಧುರಂಧರ್ ಪಾರ್ಟ್ 1 ನಂತೆಯೇ `ಧುರಂದರ್: ದಿ ರಿವೆಂಜ್’ ಪಾರ್ಟ್ 2 ಸಖತ್ ಸದ್ದು ಮಾಡುತ್ತಿದೆ. ಈ ನಡುವೆ `ಧುರಂಧರ್ ದಿ ಫೈನಲ್ ಚಾಪ್ಟರ್ 14 ಜೂನ್ 2026′ ಎಂಬ ಪೋಸ್ಟರ್ ವೊಂದು ವೈರಲ್ ಆಗುತ್ತಿದೆ.


ಒಂದಷ್ಟು ಮಂದಿ ಇದು ಧುರಂಧರ್ 3ಯ ನಿಜ ಪೋಸ್ಟರ್ ಎಂದುಕೊಂಡಿದ್ದಾರೆ. ಜೊತೆಗೆ ಜೂನ್ 4ರಂದು ಬಿಡುಗಡೆಯಾಗಲಿರುವ ಯಶ್ ಅಭಿನಯದ ಟಾಕ್ಸಿಕ್ ಚಿತ್ರಕ್ಕೆ ಧುರಂಧರ್ ಫೈಟ್ ನೀಡಲಿದೆ ಎಂಬಂತಹ ಮಾತುಗಳು ಹರಿದಾಡುತ್ತಿವೆ. ಅಸಲಿಗೆ ಧುರಂಧರ್ 3 ಬಗ್ಗೆ ಇರುವ ಪೋಸ್ಟರ್ ನಕಲಿಯಾಗಿದೆ. ಜೊತೆಗೆ ಧುರಂಧರ್ ಮುಂದಿನ ಭಾಗದ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ.

ಜೂನ್ 4 ರಂದು ‘ಟಾಕ್ಸಿಕ್’ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಯಶ್, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ ಮುಂತಾದವರು ನಟಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button