Sandalwood

ತೆಲುಗಿನಲ್ಲೂ ಬರಲಿದೆ ‘ಹರಿಕಥೆ ಅಲ್ಲ ಗಿರಿಕಥೆ’ : ಬಿಡುಗಡೆಯಾಗಿದೆ ಟ್ರೇಲರ್

ನಟ, ನಿರ್ದೇಶಕ ರಿಷಭ್ ಶೆಟ್ಟಿ ಅವರ `‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ ತೆಲುಗಿಗೆ ಡಬ್ ಆಗಿದೆ. 2022ರಲ್ಲಿ ತೆರೆಕಂಡ ಹಾಸ್ಯ ಪ್ರಧಾನ ಈ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ದ್ವಿ–ಪಾತ್ರದಲ್ಲಿ ನಟಿಸಿದ್ದರು. ಸದ್ಯ ಈ ಚಿತ್ರ ‘ಎ ಫಿಲ್ಮ್ ಬೈ ಗಿರಿ’ ಎಂಬ ಹೆಸರಿನಲ್ಲಿ ತೆಲುಗಿಗೆ ಡಬ್ ಆಗಿದೆ. ಈ ಚಿತ್ರದ ಟ್ರೇಲರ್ ಅನ್ನು ಆನಂದ್ ಆಡಿಯೋ ತೆಲುಗು ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಕರಣ್ ಆನಂದ್ ಹಾಗೂ ಅನಿರುದ್ಧ ಮಹೇಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ರಿಷಬ್ ಶೆಟ್ಟಿ ಅವರೊಂದಿಗೆ ರಚನಾ ಇಂದರ್, ತಪಸ್ವಿನಿ ಪೂಣಚ್ಚ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದರು. ವಾಸುಕಿ ವೈಭವ್‌ ಸಿನಿಮಾಗೆ ಸಂಗೀತ ನೀಡಿದ್ದರು.

ಮೇ 8ರಂದು ಈ ಸಿನಿಮಾ ರಿಲೀಸ್ ಆಗಲಿದೆ.

Show More

Related Articles

Leave a Reply

Your email address will not be published. Required fields are marked *

Back to top button