Sandalwood

ತಮಿಳುನಾಡಿನಲ್ಲಿ ಗೆದ್ದು ಬೀಗಿರುವ ವಿಜಯ್‌ ಕುಟುಂಬಕ್ಕಿದೆ ಕರ್ನಾಟಕದ ನಂಟು!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ `ತಮಿಳಗ ವೆಟ್ರಿ ಕಳಗಂ’ ಸಾಧಿಸಿದ ಗೆಲುವು ಇತಿಹಾಸ. ಪಕ್ಷ ಸ್ಥಾಪಿಸಿದ ಮೊದಲ ಪ್ರಯತ್ನದಲ್ಲೇ ಚಿತ್ರನಟ ವಿಜಯ್ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಹೀಗೆ ಭರ್ಜರಿ ಗೆಲುವು ಸಾಧಿಸಿರುವ ವಿಜಯ್ ಕುಟುಂಬಕ್ಕೂ ಕರ್ನಾಟಕಕ್ಕೂ ನಂಟು ಇದೆ.

ವಿಜಯ್ ತಂದೆ ಎಸ್‌ ಎ ಚಂದ್ರಶೇಖರ್ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ತಮಿಳಿನಲ್ಲಿ ಇವರು ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇಂತಹ ಚಂದ್ರಶೇಖರ್ ಕನ್ನಡದಲ್ಲೂ ಕೆಲವು ಚಿತ್ರಗಳನ್ನು ನಿರ್ದೇಶಿಸಿ ಗೆದ್ದಿದ್ದಾರೆ. ಗೆದ್ದ ಮಗ, ನ್ಯಾಯ ಎಲ್ಲಿದೆ, ಗೆಲುವು ನನ್ನದೇ, ಸಿಂಹ ಘರ್ಜನೆ ಸಿನಿಮಾಗಳನ್ನು ನಿರ್ದೇಶಿಸಿದ್ದು ಇದೇ ಎಸ್‌ ಎ ಚಂದ್ರಶೇಖರ್.

ಬರೀ ಅಷ್ಟೇ ಅಲ್ಲ ವಿಜಯ್ ತಾಯಿ ಶೋಭಾ ಬರಿದಿರುವ ಕಥೆಯೇ ನ್ಯಾಯ ಎಲ್ಲಿದೆ ಚಿತ್ರ. ಸಟ್ಟಂ ಒರ್ ಇರುಟರೈ ಎಂಬ ತಮಿಳು ಚಿತ್ರದ ರಿಮೇಕ್ ನ್ಯಾಯ ಎಲ್ಲಿದೆ ಸಿನಿಮಾ. ತಮಿಳಿನಲ್ಲಿ ಈ ಚಿತ್ರದಲ್ಲಿ ವಿಜಯಕಾಂತ್ ನಟಿಸಿದ್ದರು. ಕನ್ನಡದಲ್ಲಿ ಶಂಕರ್‌ನಾಗ್‌, ಆರತಿ, ದ್ವಾರಕೀಶ್ ನಟಿಸಿದ್ದರು. ಈ ಸಿನಿಮಾವನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು.

ಶಂಕರ್‌ನಾಗ್‌, ವಿಷ್ಣುವರ್ಧನ್‌, ಪ್ರಭಾಕರ್, ಅಂಬರೀಷ್‌, ದ್ವಾರಕೀಶ್, ಅಂಬಿಕಾ, ಜಯಮಾಲಾ, ಆರತಿ, ಮಾಧವಿ ಹೀಗೆ ಸಾಕಷ್ಟು ಕಲಾವಿದರ ಸಿನಿಮಾವನ್ನು ಚಂದ್ರಶೇಖರ್ ನಿರ್ದೇಶನ ಮಾಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button