Kollywood

ವಿಜಯ್ ಗೆಲುವಿನ ಭವಿಷ್ಯ ನುಡಿದಿದ್ದರು ಪೂಜಾ ಹೆಗ್ಡೆ : ವಿಡಿಯೋ ಈಗ ವೈರಲ್

ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಅಚ್ಚರಿಯ ರೀತಿಯಲ್ಲಿ ಸಾಧನೆ ಮಾಡಿದೆ. ಘಟಾನುಘಟಿ ಪಕ್ಷಗಳನ್ನೇ ಧೂಳೀಪಟ ಮಾಡಿದ ವಿಜಯ್ ರಾಜ್ಯದ ಚುಕ್ಕಾಣಿ ಹಿಡಿಯುವ ಸಿದ್ಧತೆಯಲ್ಲಿದ್ದಾರೆ. ವಿಜಯ್ ಅವರ ಅಭೂತಪೂರ್ವ ಗೆಲುವಿನ ಬಗ್ಗೆ ಚಿತ್ರರಂಗದ ಗಣ್ಯರು ಶುಭ ಹಾರೈಸಿದ್ದಾರೆ.

ಇತ್ತ, ವಿಜಯ್ ಜೊತೆಗೆ ಹಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದ ನಟಿ ಪೂಜಾ ಹೆಗ್ಡೆ ಈ ಗೆಲುವಿನ ಬಗ್ಗೆ ಹಿಂದೆಯೇ ಭವಿಷ್ಯ ನುಡಿದಿದ್ದರು. ಈ ವಿಡಿಯೋವನ್ನು ಪೂಜಾ ಹೆಗ್ಡೆ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಈಗ ಸಖತ್ ವೈರಲ್ ಆಗುತ್ತಿದೆ.

ಇದು ನಟ ವಿಜಯ್ ಹಾಗೂ ಪೂಜಾ ಹೆಗ್ಡೆ ಅಭಿನಯದ ‘ಜನ ನಾಯಗನ್’ ಚಿತ್ರದ ಶೂಟಿಂಗ್ ಸೆಟ್‍ನ ದೃಶ್ಯವಾಗಿದೆ. ಈ ಕ್ಲಿಪ್‍ನಲ್ಲಿ ಬೋರ್ಡ್ ಒಂದರ ಮೇಲೆ ‘ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?’ ಎಂದು ಬರೆದಿರುವುದು ಕಾಣುತ್ತದೆ. ಇದನ್ನು ನೋಡುತ್ತಾ ಪೂಜಾ ಹೆಗ್ಡೆ ಪಕ್ಕದಲ್ಲಿಯೇ ಇದ್ದ ವಿಜಯ್ ಕಡೆ ಕಣ್ಣು ತೋರಿಸಿ ಗೆಲುವಿನ ಬಗ್ಗೆ ಹೇಳಿದ್ದರು. ಇದನ್ನು ಕಂಡು ವಿಜಯ್ ಕೂಡಾ ಮುಗುಳ್ನಗುತ್ತಾ ಇರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.


ಈಗ ಈ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದೆ.

Show More

Related Articles

Leave a Reply

Your email address will not be published. Required fields are marked *

Back to top button