Karishma Tanna Baby Shower: ತುಳುನಾಡ ಸಂಪ್ರದಾಯದ ಸೀಮಂತ ಸಂಭ್ರಮದಲ್ಲಿ ಹಿಂದಿ ನಟಿ ಕರಿಷ್ಮಾ ತನ್ನಾ
ಹಿಂದಿ ಸಿನಿಮಾ, ಕಿರುತೆರೆಯಲ್ಲಿ ತೊಡಗಿಸಿಕೊಂಡಿರುವ ನಟಿ ಕರಿಷ್ಮಾ ತನ್ನಾ ಹಾಗೂ ವರುಣ್ ಬಂಗೇರಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ಈ ಜೋಡಿ ತುಳುನಾಡ ಸಂಪ್ರದಾಯದಲ್ಲಿ ಸೀಮಂತದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವರುಣ್ ಕರಾವಳಿ ಮೂಲದವರಾದರೆ, ಕರಿಷ್ಮಾ ಗುಜರಾತಿ ಮೂಲದವರಾಗಿದ್ದಾರೆ.
ಈ ವಿಡಿಯೋದಲ್ಲಿ ನಟಿ ಕರಿಷ್ಮಾ ಸಾಂಪ್ರದಾಯಿಕ ಸೀರೆ, ಚಿನ್ನಾಭರಣಗಳನ್ನು ಧರಿಸಿರುವುದನ್ನು ನೋಡಬಹುದು. ಸತಿ ಪತಿ ಇಬ್ಬರೂ ಕುಟುಂಬಸ್ಥರ ಸಮ್ಮುಖದಲ್ಲಿ ಸೀಮಂತದ ಖುಷಿಯನ್ನು ಅನುಭವಿಸಿದ್ದನ್ನು ಈ ವಿಡಿಯೋದಲ್ಲಿ ಕಾಣುತ್ತದೆ.
`ನಮ್ಮ ದಕ್ಷಿಣ ಭಾರತ ಶೈಲಿಯ ಮೊದಲ ಗೋಧ್ ಭರೈನ ಪ್ರೀತಿ, ಆಶೀರ್ವಾದ ಮತ್ತು ಭಾವನೆಗಳಲ್ಲಿ ಇನ್ನೂ ಮುಳುಗಿದ್ದೇನೆ. ಸುಂದರವಾದ ತುಳು ಆಚರಣೆಗಳು, ಪವಿತ್ರ ಸಂಪ್ರದಾಯಗಳು, ಮಂತ್ರಗಳು, ಹೂವುಗಳು, ಸೀರೆಗಳು ಮತ್ತು ಪ್ರತಿಯೊಂದು ಸಣ್ಣ ಪದ್ಧತಿಯನ್ನು ತುಂಬಾ ಹತ್ತಿರದಿಂದ ವೀಕ್ಷಿಸುವುದು ನಿಜವಾಗಿಯೂ ಮಾಂತ್ರಿಕವೆನಿಸಿತು. ಬಹುತೇಕ ನಾವು ಊಹಿಸಿದ್ದ ಕನಸನ್ನು ನನಸಾದಂತೆ ಇತ್ತು. ಪೂಜೆಗಳು ಮತ್ತು ಕುಟುಂಬದ ಆಶೀರ್ವಾದಗಳಿಂದ ಹಿಡಿದು ಪ್ರತಿಯೊಂದು ಆಚರಣೆಯಲ್ಲಿನ ಆಪ್ತತೆ ಮತ್ತು ಪ್ರೀತಿಯವರೆಗೆ, ಇಡೀ ದಿನವು ನಮಗೆ ಮತ್ತು ನಮ್ಮ ಪುಟ್ಟ ಮಗುವಿಗೆ ತುಂಬಾ ಶುದ್ಧ, ಭಾವನಾತ್ಮಕ ಮತ್ತು ಆಳವಾಗಿ ವಿಶೇಷವೆನಿಸಿತು. ಅತ್ಯಂತ ಸುಂದರವಾದ, ಸಾಂಪ್ರದಾಯಿಕ ರೀತಿಯಲ್ಲಿ ಕನಸು ನನಸಾಯಿತು. ನಮ್ಮ ಹೃದಯಗಳು ತುಂಬಿವೆ’ ಎಂದು ಕರಿಷ್ಮಾ ತನ್ನ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಕರಿಷ್ಮಾ ಮತ್ತು ವರುಣ್ 2022ರಲ್ಲಿ ಮುಂಬೈನಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಕರಿಷ್ಮಾ ಕೊನೆಯದಾಗಿ 2021ರ ಚಲನಚಿತ್ರ ಲಾಹೋರ್ ಕಾನ್ಫಿಡೆನ್ಶಿಯಲ್ ಮತ್ತು 2023 ರ ವೆಬ್ ಸರಣಿ ಸ್ಕೂಪ್ನಲ್ಲಿ ನಟಿಸಿದ್ದಾರೆ.



