Bollywood
ಸಿನಿಮಾದಲ್ಲಿ ವಿಲನ್, ನಿಜ ಜೀವನದಲ್ಲಿ ಹೀರೋ : 6.5 ಲಕ್ಷಕ್ಕೂ ಹೆಚ್ಚು ಮರ ನೆಟ್ಟಿ ಸಯಾಜಿ ಶಿಂಧೆ
ಬಹುಭಾಷಾ ನಟ ಸಯಾಜಿ ಶಿಂಧೆ ತನ್ನ ಸಮಾಜಮುಖಿ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ವಿಲನ್ ರೋಲ್‍ನಲ್ಲಿ ನಟಿಸಿದ್ದರೂ ಇವರು ನಿಜಜೀವನದಲ್ಲಿ ತಮ್ಮ ಕಾರ್ಯದ ಮೂಲಕವೇ ಹೀರೋ ಆಗಿದ್ದಾರೆ.
ತಮ್ಮ ಪರಿಸರ ಚಳುವಳಿ `ಸಹ್ಯಾದ್ರಿ ದೇವ್‍ರೈ’ ಮೂಲಕ ಮಹಾರಾಷ್ಟ್ರದಾದ್ಯಂತ 6.5 ಲಕ್ಷಕ್ಕೂ ಹೆಚ್ಚು ಮರಗಳನ್ನು ಇವರು ನೆಟ್ಟಿದ್ದಾರೆ. ಈ ಕೆಲಸವು ತಮ್ಮ ತಾಯಿಯ ಮೇಲಿನ ಪ್ರೀತಿಯಿಂದ ಪ್ರಾರಂಭವಾಯಿತು ಮತ್ತು ನಂತರ ಹಸಿರು ಹೊದಿಕೆಯನ್ನು ಪುನಃಸ್ಥಾಪಿಸುವ ದೊಡ್ಡ ಪ್ರಯತ್ನವಾಗಿ ಬೆಳೆಯಿತು ಎಂದು ಇವರು ಹೇಳಿದ್ದಾರೆ. ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಇವರು ಸಸಿ ನೆಟ್ಟು ಪರಿಸರ ರಕ್ಷಣೆಗೆ ಪಣತೊಟ್ಟಿದ್ದಾರೆ.



