ಸೈಬರ್ ವಂಚಕರಿಂದ 2.43 ಲಕ್ಷ ರೂಪಾಯಿ ಕಳೆದುಕೊಂಡ ಬಾಲಿವುಡ್ ನಟಿ!
ಬಾಲಿವುಡ್ ನಟಿ, ನಿರ್ಮಾಪಕಿ ಕೀರ್ತಿ ಕುಲ್ಹಾರಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಸೈಬರ್ ವಂಚಕರು ಕೀರ್ತಿ ಅವರ ಮೊಬೈಲ್ ಫೆÇೀನ್ ಮತ್ತು ಕ್ರೆಡಿಟ್ ಕಾರ್ಡ್‍ಗೆ ಅನಧಿಕೃತ ಪ್ರವೇಶ ಮಾಡಿ ಕೆಲವೇ ನಿಮಿಷಗಳಲ್ಲಿ 243,852 ರೂಪಾಯಿಗಳನ್ನು ವಂಚಿಸಿದ್ದಾರೆ. ಈ ಬಗ್ಗೆ ಇವರು ಮುಂಬೈನ ಅಂಬೋಲಿ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಎಫ್‍ಐಆರ್ ಪ್ರಕಾರ, ವರ್ಸೋವಾದಲ್ಲಿ ನೆಲೆಸಿರುವ ನಟಿ ಕೀರ್ತಿ ಅಂಧೇರಿ ವೆಸ್ಟ್‍ನ ಫನ್ ರಿಪಬ್ಲಿಕ್ ಮಾಲ್ ಬಳಿಯ ಸಿನೆಪೆÇಲಿಸ್ ಥಿಯೇಟರ್‍ನಲ್ಲಿದ್ದಾಗ, ಅವರ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಏರೋಮೆಕ್ಸಿಕೊ ಏರ್‍ಲೈನ್ಸ್‍ನಲ್ಲಿ 2,525 ಯುಎಸ್‍ಡಿ ಮೌಲ್ಯದ ವಹಿವಾಟಿನ ಬಗ್ಗೆ ಅಲರ್ಟ್ ಅನ್ನು ಸ್ವೀಕರಿಸಿದ್ದರು.
ಈ ಅನುಮಾನಾಸ್ಪದ ವಿದೇಶಿ ವಹಿವಾಟನ್ನು ಗಮನಿಸಿದ ಕೀರ್ತಿ ತಕ್ಷಣ ತಮ್ಮ ಬ್ಯಾಂಕ್ ಖಾತೆಯನ್ನು ಸಂಪರ್ಕಿಸಿದಾಗ ನಟಿಯ ಕ್ರೆಡಿಟ್ ಕಾರ್ಡ್ ಬಳಸಿ ನಾಲ್ಕು ಪ್ರಮುಖ ಅನಧಿಕೃತ ವಹಿವಾಟುಗಳನ್ನು ನಡೆಸಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು. ಆ ಬಳಿಕ ಕಾರ್ಡ್ ಅನ್ನು ನಿರ್ಬಂಧಿಸಲಾಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.



