Bollywood
ಧುರಂಧರ್ ನಿರ್ಮಾಣ ವಿನ್ಯಾಸಕನ ವಿರುದ್ಧ ಅತ್ಯಾಚಾರ ಆರೋಪ
ಸೂಪರ್ ಹಿಟ್ ಧುರಂಧರ್ ಚಿತ್ರಕ್ಕಾಗಿ ಅದ್ಭುತ ಸೆಟ್ಗಳನ್ನು ರಚಿಸಿದ ನಿರ್ಮಾಣ ವಿನ್ಯಾಸಕ ಸೈನಿ ಎಸ್ ಜೋಹ್ರೇ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ವರದಿ ಪ್ರಕಾರ ಯುವತಿಯೊಬ್ಬಳು ಲೈಂಗಿಕ ದೌರ್ಜನ್ಯ, ಅಕ್ರಮ ಬಂಧನ ಮತ್ತು ದೈಹಿಕ ಕಿರುಕುಳದ ಆರೋಪ ಮಾಡಿದ್ದು, ಈ ಬಗ್ಗೆ ಚಂಡೀಗಢದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.
ಪಂಚತಾರಾ ಹೋಟೆಲ್ನಲ್ಲಿಯೇ ಅತ್ಯಾಚಾರ ನಡೆದಿದೆ ಎಂದು ಈಕೆ ದೂರಿದ್ದು, ಈ ಹಿನ್ನೆಲೆಯಲ್ಲಿ ಏಪ್ರಿಲ್ 21 ರಂದು ಎಫ್ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ ಪೆÇಲೀಸರು ಜೋಹ್ರೇ ಅವರನ್ನು ಬಂಧಿಸಿದರು. ಬಳಿಕ ಅವರಿಗೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.



