Sandalwood
1968ರ ಅಪರೂಪದ ಫೋಟೋ ಹಂಚಿಕೊಂಡ ನಟ ಶ್ರೀನಾಥ್
ಕನ್ನಡದ ಹಿರಿಯ ನಟ ಶ್ರೀನಾಥ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ 1968ರ ಅಪರೂಪದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಹಿರಿಯ ನಟಿ ದಿವಂಗತ ಪಂಡರೀಬಾಯಿ, ನಿರ್ದೇಶಕ ಎಸ್.ಕೆ.ಎ. ಚಾರಿ ಅವರನ್ನು ನೋಡಬಹುದಾಗಿದೆ.
View this post on Instagram
ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ ಶ್ರೀನಾಥ್ ಅವರು, `1968ರಲ್ಲಿ ನನ್ನ ಚಿತ್ರ ‘ಮಧುರ ಮಿಲನ’ ಚಿತ್ರೀಕರಣದ ಸಂದರ್ಭದಲ್ಲಿ ಪಂಡರಿ ಭಾಯಿ ಹಾಗೂ ನಿರ್ದೇಶಕ ಎಸ್.ಕೆ.ಎ. ಚಾರಿ ಅವರೊಂದಿಗೆ ಕಳೆದ ಅಪರೂಪದ ಕ್ಷಣ’ ಎಂದು ಬರೆದುಕೊಂಡಿದ್ದಾರೆ.
1969ರ ಫೆಬ್ರವರಿ 25ರಂದು ಬಿಡುಗಡೆಯಾಗಿದ್ದ `ಮಧುರ ಮಿಲನ’ ಸಿನಿಮಾದಲ್ಲಿ ಶ್ರೀನಾಥ್ ನಾಯಕ ನಟನಾಗಿ ಅಭಿನಯಿಸಿದ್ದರು.



