ಅಭಿಮಾನಿಗಳಿಗೆ ಅಪಘಾತ ವಿಮೆ ಮಾಡಿಸಿದ `ಐಕಾನ್ ಸ್ಟಾರ್’ ಅಲ್ಲು ಅರ್ಜುನ್
ಖ್ಯಾತ ನಟ, `ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಕಾಳಜಿ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ `ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್ ವಾರ್ಷಿಕ ಶೃಂಗಸಭೆ 2026′ ಎಂಬ ಬೃಹತ್ ಸಮಾರಂಭದಲ್ಲಿ ಭಾಗವಹಿಸಿದ್ದ ಸುಮಾರು 1,000ಕ್ಕೂ ಅಧಿಕ ಅಭಿಮಾನಿಗಳು ಪಾಲ್ಗೊಂಡಿದ್ದರು. ಜೊತೆಗೆ ಈ ಸಮಾವೇಶದ ಇನ್ನೊಂದು ಪ್ರಮುಖಾಂಶ ಎಂದರೆ ಎಎಎಫ್ಎ (ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್)ನ ಎಲ್ಲಾ ಸದಸ್ಯರಿಗೆ ಅಪಘಾತ ವಿಮಾ ರಕ್ಷಣೆಯನ್ನು ಘೋಷಿಸಿದ್ದಾರೆ.
More than just a fan gathering. ❤️🔥
The AAFA Annual Summit 2026 brought together over 1,000 AAFA members from 7 states. Along with spending hours meeting every fan for an individual photograph, Icon star @alluarjun announced insurance coverage for AAFA members and hosted lunch… pic.twitter.com/wmE0odN8Yn
— Team Allu Arjun (@TeamAAOfficial) July 28, 2026
ಈ ಉಪಕ್ರಮದಡಿಯಲ್ಲಿ, ರಾಜ್ಯ ಸಮಿತಿ ಸದಸ್ಯರು 5 ಲಕ್ಷ ರೂಪಾಯಿಯ ಅಪಘಾತ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ ಮತ್ತು ಜಿಲ್ಲಾ ಸಮಿತಿ ಸದಸ್ಯರು 3 ಲಕ್ಷ ರೂಪಾಯಿ ಅಪಘಾತ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಈ ಉಪಕ್ರಮವು 900 ಕ್ಕೂ ಹೆಚ್ಚು ಅಭಿಮಾನಿ ಸಂಘದ ಸದಸ್ಯರಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ.
ಈ ಬೃಹತ್ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಒಡಿಶಾ ಸೇರಿ ಹಲವು ರಾಜ್ಯಗಳ ಅಭಿಮಾನಿಗಳು ಪಾಲ್ಗೊಂಡಿದ್ದರು. ಈ ವೇಳೆ ಅಲ್ಲು ಅರ್ಜುನ್ ಅಭಿಮಾನಿಗಳೊಂದಿಗೆ ಸಂವಾದವನ್ನೂ ನಡೆಸಿದರು.
ಅಲ್ಲು ಅರ್ಜುನ್ ಅವರ ಈ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.



