Sandalwood

ರಾವಣನಾಗಿ ಯಶ್ ಅಬ್ಬರ : ರಿಷಭ್ ಶೆಟ್ಟಿ ಮೆಚ್ಚುಗೆ

ಬಾಲಿವುಡ್‍ನ ಬಹುನಿರೀಕ್ಷಿತ `ರಾಮಾಯಣ’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಿದ್ದಾರೆ. ಗುರುವಾರ ಬ್ರಹ್ಮಮುಹೂರ್ತದಲ್ಲಿ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಯಶ್ ಅವರ ಲುಕ್, ಅಬ್ಬರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ನಟ, ನಿರ್ದೇಶಕ ರಿಷಭ್ ಶೆಟ್ಟಿ ಅವರು ಕೂಡಾ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಿಷಭ್ ಶೆಟ್ಟಿ, ಯಶ್ ಅವರ ನಟನೆಯ ಬಗ್ಗೆ ಹೇಳಲು ನನ್ನ ಬಳಿ ಪದಗಳೇ ಸಾಲುತ್ತಿಲ್ಲ. ಕನ್ನಡಿಗನಾಗಿ ನೀವು ಸದಾ ನಮಗೆ ಹೆಮ್ಮೆ ತಂದಿದ್ದೀರಿ ಎಂದು ಬರೆದುಕೊಂಡಿದ್ದಾರೆ.


ಜೊತೆಗೆ ನಮ್ಮ ಪೌರಾಣಿಕ ಕಥೆಗಳು, ಪಾತ್ರಗಳನ್ನು ದೃಶ್ಯರೂಪಕ್ಕೆ ತರುವುದು ಸುಲಭವಲ್ಲ. ಈ ಕಾರ್ಯವನ್ನು ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದೂ ರಿಷಭ್ ಕೊಂಡಾಡಿದ್ದಾರೆ. ಶ್ರೀರಾಮನ ಪಾತ್ರವನ್ನು ನಿರ್ವಹಿಸುತ್ತಿರುವ ರಣಬೀರ್ ಕಪೂರ್ ಅವರ ಬಗ್ಗೆಯೂ ರಿಷಭ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button