Sandalwood
ರೇಷ್ಮೆ ಸೀರೆಯುಟ್ಟ ಫೋಟೋ ಹಂಚಿಕೊಂಡ ವಿಜಯಲಕ್ಷ್ಮೀ ದರ್ಶನ್ : `ಅತ್ತಿಗೆಗೆ’ ಡಿ ಬಾಸ್ ಅಭಿಮಾನಿಗಳ ಮೆಚ್ಚುಗೆ
ಸ್ಯಾಂಡಲ್‍ವುಡ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇವರು ಹಂಚಿಕೊಳ್ಳುವ ಪೋಸ್ಟ್‍ಗಳು ನೆಟ್ಟಿಗರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗುತ್ತಿವೆ. ಇದೀಗ ವಿಜಯಲಕ್ಷ್ಮೀ ಅವರು ರೇಷ್ಮೆ ಸೀರೆಯುಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ ತಮ್ಮ ಶ್ವಾನವನ್ನು ಮುದ್ದಿಸುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ನೆಟ್ಟಿಗರ ಗಮನ ಸೆಳೆದಿದೆ.
View this post on Instagram
ಸಹಜವಾಗಿಯೇ ಡಿ ಬಾಸ್ ಅಭಿಮಾನಿಗಳು ಅತ್ತಿಗೆಯ ಫೋಟೋವನ್ನು ಕಂಡು ಖುಷಿ ಪಟ್ಟಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಕಳೆಯುತ್ತಿದ್ದಾರೆ. ಪತಿಯ ಈ ಸಂಕಷ್ಟದ ಸಮಯದಲ್ಲಿ ಅವರಿಗೆ ಬಲವಾಗಿ ನಿಂತು ವಿಜಯಲಕ್ಷ್ಮೀ ಕಾನೂನು ಹೋರಾಟ ಮಾಡುತ್ತಿದ್ದಾರೆ.



