Sandalwood

Vijayalakshmi Darshan : ಒಡೆದ ಹೃದಯದೊಂದಿಗೆ ಹಾಡಿನ ಮೂಲಕ ಬೇಸರ ತೋಡಿಕೊಂಡ ವಿಜಯಲಕ್ಷ್ಮಿ ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತ ಪತಿಯನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಪತ್ನಿ ವಿಜಯಲಕ್ಷ್ಮೀ ಕಾನೂನು ಹೋರಾಟ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಸುಪ್ರೀಂಕೋರ್ಟ್ ದರ್ಶನ್ ಅವರಿಗೆ ಜಾಮೀನು ನಿರಾಕರಿಸಿ ಒಂದು ವರ್ಷದೊಳಗೆ ಪ್ರಕರಣದ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ. ಹೀಗಾಗಿ ಒಂದು ವರ್ಷದ ತನಕ ದರ್ಶನ್ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಇದೆ.

ಈ ಎಲ್ಲಾ ಸನ್ನಿವೇಶಗಳಿಂದ ನೊಂದಿರುವ ವಿಜಯಲಕ್ಷ್ಮೀ ಭಾನುವಾರ ರಾತ್ರಿ ಹಾಡಿನ ಮೂಲಕ ತಮ್ಮ ಬೇಸರ ತೋಡಿಕೊಂಡ ಸ್ಟೋರಿ ಹಂಚಿಕೊಂಡಿದ್ದಾರೆ. ದರ್ಶನ್ ಅವರ ಬ್ಲ್ಯಾಕ್ ಅಂಡ್ ವೈಟ್ ಫೆÇೀಟೋ ಹಂಚಿಕೊಂಡ ವಿಜಯಲಕ್ಷ್ಮೀ ಹಿನ್ನೆಲೆಯಲ್ಲಿ `ಲಂಕೇಶ್ ಪತ್ರಿಕೆ’ ಸಿನಿಮಾದ ಹಾಡೊಂದರ ಸಾಲಾದ `ಇದು ಮರೆಯದ ಹಾಡು… ಮೌನಗಳೇ ಸಾಕ್ಷಿಗಳು… ಇದು ಮುಗಿಯದ ನೆನಪು… ವಿರಹಗಳೇ ಗುರುತುಗಳು…’ ಅನ್ನು ಜೋಡಿಸಿ ಚೂರಾದ ಹೃದಯವನ್ನೂ ಹಾಕಿಕೊಂಡಿದ್ದಾರೆ.

ಈ ಸ್ಟೋರಿ ನೋಡಿ ದರ್ಶನ್ ಅಭಿಮಾನಿಗಳೂ ಭಾವುಕರಾಗಿದ್ದಾರೆ. ಜೊತೆಗೆ ತಮ್ಮ ತಮ್ಮ ಇನ್‍ಸ್ಟಾಗ್ರಾಂ ಖಾತೆಗಳಲ್ಲಿ ಈ ಸ್ಟೋರಿಯನ್ನು ಹಂಚಿಕೊಳ್ಳುತ್ತಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button