Sandalwood

`ವೃಷಭ’ ಚಿತ್ರಕ್ಕೆ ಬಿಗ್‍ಬಾಸ್ ರಘು ಹೇಗೆ ಸಿದ್ಧವಾಗಿದ್ದಾರೆ ನೋಡಿ! ಅಬ್ಬಬ್ಬಾ!

ಕನ್ನಡದ ಬಿಗ್‍ಬಾಸ್ ಸೀಸನ್ 12 ರ ಸ್ಪರ್ಧಿ, ಚಿತ್ರನಟ ಮ್ಯೂಟಂಟ್ ರಘು ತಾನು ವೃಷಭ ಚಿತ್ರಕ್ಕೆ ಹೇಗೆ ಸಿದ್ಧವಾಗಿದ್ದೆ ಎನ್ನುವುದನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ರಘು ತಾನೇ ಪ್ರಾಸ್ಥೆಟಿಕ್ ಮೇಕಪ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಇವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. `ವೃಷಭ ನಿಜಕ್ಕೂ ಜೀವಮಾನದ ಅನುಭವವಾಗಿತ್ತು. 5 ಗಂಟೆಗಳ ಕಾಲ ಕೃತಕ ಮೇಕಪ್ ಮಾಡಿದ ನಂತರವೂ ನನಗೆ ತೃಪ್ತಿಯಾಗಲಿಲ್ಲ. ಒಬ್ಬ ಕಲಾವಿದ, ಶಿಲ್ಪಿ ಮತ್ತು ಚರ್ಮ ತಜ್ಞರಾಗಿ, ನಾನು ನನ್ನ ಮೇಲೆಯೇ ಕೆಲಸ ಮಾಡಿಕೊಳ್ಳಲು ಇನ್ನೊಂದು ಗಂಟೆ ಕಳೆದೆ – ಆಳ, ವಿವರ ಮತ್ತು ಪರಿಪೂರ್ಣತೆಯನ್ನು ಸೇರಿಸಿಕೊಂಡೆ’ ಎಂದು ರಘು ತನ್ನ ಈ ಮೇಕಪ್ ಬಗ್ಗೆ ಬರೆದುಕೊಂಡಿದ್ದಾರೆ.


ಸದ್ಯ ಈ ವಿಡಿಯೋವನ್ನು ಕಂಡ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button