Sandalwood
ಕೊಡಗಿನಲ್ಲಿ ಮಕ್ಕಳೊಂದಿಗೆ ರಾಧಿಕಾ ಪಂಡಿತ್ ವಿಹಾರ
ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಈಗ ಸಂಪೂರ್ಣವಾಗಿ ತನ್ನ ಕುಟುಂಬದತ್ತ ಗಮನ ಕೇಂದ್ರೀಕರಿಸಿದ್ದಾರೆ. ಚಿತ್ರರಂಗದಿಂದ ಕೊಂಚ ದೂರವೇ ಉಳಿದಿರುವ ರಾಧಿಕಾ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತಿದ್ದಾರೆ.
ತಮ್ಮ ಈ ಖುಷಿಯ ಕ್ಷಣಗಳನ್ನು ಇವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಂತೆಯೇ ಸದ್ಯ ರಾಧಿಕಾ ಕೊಡಗಿನಲ್ಲಿ ಮಕ್ಕಳೊಂದಿಗೆ ಆನಂದಿಸಿದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
View this post on Instagram
ಕಾಫಿ ತೋಟ, ಸುಂದರ ಸ್ಥಳಗಳಲ್ಲಿ ವಿಹರಿಸುತ್ತಾ, ಖುಷಿಯ ಫೋಟೋಗಳನ್ನು ಕ್ಲಿಕ್ಕಿಸುತ್ತಾ ರಾಧಿಕಾ ಹಾಗೂ ಇಬ್ಬರು ಮಕ್ಕಳು ರಜೆಯ ಆನಂದವನ್ನು ಸವಿದಿದ್ದಾರೆ.



