Sandalwood

ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋದ ನಟ ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಸ್ಯಾಂಡಲ್‍ವುಡ್ ಸ್ಟಾರ್ ದರ್ಶನ್ ಅವರು ಜಾಮೀನು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿ ವಿಚಾರಣೆ ಮೇ 5 ರಂದು ನಡೆಯಲಿದೆ.

`ಪ್ರಕರಣದ ವಿಚಾರಣೆ ಈಗ ನಡೆಯುತ್ತಿದೆ. ಎಂಟು ತಿಂಗಳು ಕಳೆದರೂ 273 ಸಾಕ್ಷಿಗಳ ಪೈಕಿ 15 ಸಾಕ್ಷಿಗಳ ವಿಚಾರಣೆಯಷ್ಟೇ ಮುಗಿದೆ. ಈ ರೀತಿ ವಿಳಂಬವಾದರೆ ವಿಚಾರಣೆ ಕೊನೆಗೊಳ್ಳಲು ವರ್ಷಗಳು ಬೇಕಾಗಬಹುದು. ಇದರಿಂದ ಜಾಮೀನು ನೀಡಬೇಕು’ ಎಂದು ದರ್ಶನ್ ಅವರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದೇ ಪ್ರಕರಣದಲ್ಲಿ ದರ್ಶನ್ ಅವರಿಗೆ ಈ ಹಿಂದೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ದರ್ಶನ್ ಹಾಗೂ ಇತರ ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನು ನೀಡಿದ್ದ ಜಾಮೀನು ಆದೇಶವನ್ನು 2025ರ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಹೀಗಾಗಿ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಗಿತ್ತು.

Show More

Related Articles

Leave a Reply

Your email address will not be published. Required fields are marked *

Back to top button