`ಧುರಂಧರ್’ ಸ್ವೀಕೆಲ್ ಎದುರು ನೋಡುತ್ತಿದ್ದೇನೆ : ಚಿತ್ರ ವೀಕ್ಷಿಸಿದ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಹರ್ಷ
ಬಾಲಿವುಡ್ ಬ್ಲಾಕ್ ಬಸ್ಟರ್ ಸ್ಪೈ ಥ್ರಿಲ್ಲರ್ `ಧುರಂಧರ್’ ಸಿನಿಮಾವನ್ನು ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ವೀಕ್ಷಿಸಿದ್ದಾರೆ. ಭಾರತಕ್ಕೆ ಅಧಿಕೃತವಾಗಿ ಭೇಟಿ ನೀಡುವ ಮುನ್ನ ಇವರು ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ ಅಭಿನಯದ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ತನ್ನ ಪುತ್ರನ ಸಲಹೆಯಂತೆ ತಾನು ಧುರಂಧರ್ ವೀಕ್ಷಿಸಿದ್ದಾಗಿ ಇವರು ಹೇಳಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಲೆಕ್ಸಾಂಡ್ ಸ್ಟಬ್ ಈ ವಿಷಯ ತಿಳಿಸಿದ್ದಾರೆ. `ನಾನು ಈ ಸಿನಿಮಾದ ನಿರೂಪಣೆಯ ಒಂದು ಭಾಗವಾಗಿದ್ದೆ. ಉಗ್ರವಾದದ ವಿರುದ್ಧ ಹೋರಾಡಲು ನನಗೆ ಸಂತೋಷವಾಗುತ್ತಿದೆ’ ಎಂದು ಇವರು ಹೇಳಿದ್ದಾರೆ. ಜೊತೆಗೆ ಮಾರ್ಚ್ 19 ರಂದು ಬಿಡುಗಡೆಯಾಗಲಿರುವ ಸೀಕ್ವೆಲ್ ಅನ್ನು ಎದುರು ನೋಡುತ್ತಿದ್ದೇನೆ ಎಂದೂ ಇವರು ತಿಳಿಸಿದ್ದಾರೆ. ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರು ಮಾರ್ಚ್ 4 ರಿಂದ 7ರ ತನಕ ಭಾರತದ ಭೇಟಿಗೆ ಆಗಮಿಸಿದ್ದರು.
View this post on Instagram
ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು 2025ರ ಡಿಸೆಂಬರ್ 5 ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಜೊತೆಗೆ ಇದು ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈಗಾಗಲೇ ಸಾಕಷ್ಟು ಸದ್ದು ಮಾಡಿರುವ `ಧುರಂಧರ್’ ಚಿತ್ರದ ಸೀಕ್ವೆಲ್ ಮಾರ್ಚ್ 19 ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ. ಇದಕ್ಕೆ ಮುಂಗಡ ಬುಕ್ಕಿಂಗ್ ಕೂಡಾ ಶುರುವಾಗಿದೆ.



