Bollywood

ಬಾಲಿವುಡ್ ಹಿರಿಯ ನಟಿ ಮಧು ಮಲ್ಹೋತ್ರಾ ವಿಧಿವಶ

ಬಾಲಿವುಡ್‍ನ ಖ್ಯಾತ ನಟಿ ಮಧು ಮಲ್ಹೋತ್ರಾ ವಿಧಿವಶರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಬಿಗ್ ಬಿ ಅಮಿತಾಭ್ ಬಚ್ಚನ್ ಅವರ 1982ರಲ್ಲಿ ಬಿಡುಗಡೆಯಾದ ಸತ್ತೆ ಪೆ ಸತ್ತಾ, 1983ರಲ್ಲಿ ಜಾಕಿ ಶ್ರಾಫ್ ಅವರ ಚೊಚ್ಚಲ ಚಿತ್ರ ಹೀರೋ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಇವರು ಪೋಷಕ ಪಾತ್ರದ ಮೂಲಕ ಗಮನ ಸೆಳೆದಿದ್ದರು.

ಮಧು ಮಲ್ಹೋತ್ರಾ ಅವರು 1975 ರಲ್ಲಿ ರಾಮ್ಸೆ ಬ್ರದರ್ಸ್ ಅವರ ಹಾರರ್ ಚಿತ್ರ ಅಂಧೇರಾದ ಮೂಲಕ ಸಿನಿಲೋಕಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಬಹುತೇಕ ಪ್ರಮುಖ ನಟ, ನಟಿಯರೊಂದಿಗೆ ಇವರು ತೆರೆ ಹಂಚಿಕೊಂಡಿದ್ದರು. ಇವರು ಪ್ರಮುಖ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲದಿದ್ದರೂ ಅನೇಕ ಯಶಸ್ವಿ ಬಾಲಿವುಡ್ ಚಲನಚಿತ್ರಗಳು ಮತ್ತು ಸ್ಮರಣೀಯ ದೃಶ್ಯಗಳಲ್ಲಿ ಪರಿಚಿತ ಮುಖವಾಗಿ ಉಳಿದರು.

Show More

Related Articles

Leave a Reply

Your email address will not be published. Required fields are marked *

Back to top button