Bollywood

ಗೋಲ್‍ಮಾಲ್ 5 ಘೋಷಿಸಿದ ರೋಹಿತ್ ಶೆಟ್ಟಿ : ಟೀಮ್ ಸೇರಿದ್ದಾರೆ ಅಕ್ಷಯ್

ಬಾಲಿವುಡ್‍ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಗೋಲ್‍ಮಾಲ್ 5 ಚಿತ್ರವನ್ನು ಘೋಷಿಸಿದ್ದಾರೆ. ಶನಿವಾರ ತಮ್ಮ 52ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸೂಪರ್‍ಹಿಟ್ ಗೋಲ್‍ಮಾಲ್ ಸರಣಿಯ ಐದನೇ ಸಿನಿಮಾವನ್ನು ಇವರು ಘೋಷಣೆ ಮಾಡಿದ್ದಾರೆ. ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ರೋಹಿತ್ ಶೆಟ್ಟಿ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಗೋಲ್‍ಮಾಲ್ ತನ್ನ ಬದುಕು ಬದಲಾಯಿಸಿದ ಚಿತ್ರ ಎಂದು ಇವರು ಬರೆದುಕೊಂಡಿದ್ದಾರೆ. `20 ವರ್ಷಗಳ ಹಿಂದೆ, ಮೊದಲ ‘ಗೋಲ್‍ಮಾಲ್’ ಬಿಡುಗಡೆಯಾಯಿತು. ಇದು ನನ್ನ ಬದುಕನ್ನು ಬದಲಾಯಿಸಿದ ಸಿನಿಮಾ. ಅದರ ಕ್ರೆಡಿಟ್ ಪ್ರೇಕ್ಷಕರಿಗೆ ಸಲ್ಲುತ್ತದೆ’ ಎಂದು ಅವರು ತಮ್ಮ ಪೋಸ್ಟ್‍ನಲ್ಲಿ ಬರೆದಿದ್ದಾರೆ.

 

View this post on Instagram

 

A post shared by Rohit Shetty (@itsrohitshetty)


ಈ ಚಿತ್ರದಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ, ಶ್ರೇಯಸ್ ತಲ್ಪಡೆ, ಕುನಾಲ್ ಕೆಮ್ಮು, ಶರ್ಮಾನ್ ಜೋಶಿ, ತುಷಾರ್ ಕಪೂರ್ ಸೇರಿದಂತೆ ಹಲವರು ನಟಿಸಿದ್ದಾರೆ.

ನಟ ಅಕ್ಷಯ್ ಕುಮಾರ್ ಕೂಡಾ ಈ ಚಿತ್ರಕ್ಕೆ ಶುಭಹಾರೈಸಿದ್ದಲ್ಲದೆ, ಈ ತಂಡ ಸೇರಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Akshay Kumar (@akshaykumar)


2006ರಲ್ಲಿ ಗೋಲ್‍ಮಾಲ್ ಸಿನಿಮಾ ಬಿಡುಗಡೆಯಾಗಿತ್ತು. ಇದಾದ ಬಳಿಕ 2008, 2010 ಮತ್ತು 2017 ರಲ್ಲಿ ಇತರ ಸರಣಿ ತೆರೆಕಂಡಿತ್ತು.

Show More

Related Articles

Leave a Reply

Your email address will not be published. Required fields are marked *

Back to top button