News Roundup
ನೇಪಾಳದಲ್ಲಿ ಭೀಕರ ಅಪಘಾತ : ಏಳು ಭಾರತೀಯ ಯಾತ್ರಿಕರು ದುರ್ಮರಣ

ನೇಪಾಳದ ಗೂರ್ಖಾ ಜಿಲ್ಲೆಯಲ್ಲಿ ಮೈಕ್ರೋಬಸ್ ಅಪಘಾತಕ್ಕೀಡಾಗಿ ಏಳು ಭಾರತೀಯ ಯಾತ್ರಿಕರು ದುರ್ಮರಣಕ್ಕೀಡಾಗಿ, ಹಲವರು ಗಾಯಗೊಂಡಿದ್ದಾರೆ. ಲಭ್ಯ ವರದಿ ಪ್ರಕಾರ ಮನಕಮನಾ ದೇವಸ್ಥಾನಕ್ಕೆ ಹೋಗಿ ಹಿಂತಿರುಗುತ್ತಿದ್ದ 14 ಭಾರತೀಯ ಯಾತ್ರಿಕರು ಸೇರಿದಂತೆ ಒಟ್ಟು 16 ಮಂದಿ ಇದ್ದ ಎಲೆಕ್ಟ್ರಿಕ್ ಮೈಕ್ರೋಬಸ್ ಶಾಹಿನ್ ಲಖನೌ ಗ್ರಾಮೀಣ ಪುರಣಸಭೆಯ ಕಾಂಟಾರ್ ಬಳಿ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪರಿಣಾಮ ಈ ಘಟನೆ ನಡೆದಿದೆ.
ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಐವರು ಪುರುಷರು. ಏಳು ಮಂದಿ ಗಾಯಗೊಂಡಿದ್ದು ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಹನ ಚಾಲಕ ಯಾವುದೇ ಗಾಯಗಳಿಲ್ಲದ ಪಾರಾಗಿದ್ದು, ಸಹಾಯಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.



