AutomobileNews Roundup

ಹೀಗೆ ಮಾಡಿದರೆ ನಿಮ್ಮ ಫಾಸ್ಟ್‌ಟ್ಯಾಗ್ ಬ್ಲ್ಯಾಕ್‌ ಲಿಸ್ಟ್‌ಗೆ ಸೇರಬಹುದು : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಚ್ಚರಿಕೆ

ಫಾಸ್ಟ್‌ ಟ್ಯಾಗ್‌ನ ಅನುಚಿತ ಬಳಕೆಯನ್ನು ಸಹಿಸುವುದಿಲ್ಲ ಎಂದು ಹೇಳಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಬಳಕೆದಾರರಿಗೆ ಹೊಸ ಸಲಹೆಯನ್ನು ನೀಡಿದೆ. ಫಾಸ್ಟ್‌ಟ್ಯಾಗ್‌ನ ಅನುಚಿತ ಬಳಕೆಯು ಅದನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಲು ಕಾರಣವಾಗಬಹುದು ಎಂದು ಎಚ್ಚರಿಸಿದೆ.

ಸ್ವಯಂಚಾಲಿತ ಟೋಲ್ ಪಾವತಿಗಳನ್ನು ಸಕ್ರಿಯಗೊಳಿಸಲು RFID ತಂತ್ರಜ್ಞಾನವನ್ನು ಬಳಸುವ ಫಾಸ್ಟ್‌ಟ್ಯಾಗ್ ಅನ್ನು ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಸರಿಯಾಗಿ ಅಂಟಿಸುವ ಅಗತ್ಯವಿದೆ. ಆದಾಗ್ಯೂ ಕೆಲ ವಾಹನ ಚಾಲಕರು ಈ ನಿಯಮವನ್ನು ಪಾಲಿಸುತ್ತಿಲ್ಲ ಹಾಗೂ ಟೋಲ್ ಪ್ಲಾಜಾಗಳಲ್ಲಿ ಟ್ಯಾಗ್ ಅನ್ನು ಕೈಯಲ್ಲಿ ಹಿಡಿಯುತ್ತಿದ್ದಾರೆ. ಈ ಅಭ್ಯಾಸವು ಸುಗಮ ಟೋಲ್ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಹೀಗಾಗಿ ಇಂತಹ ಫಾಸ್ಟ್‌ಟ್ಯಾಗ್ ಬಳಕೆ ಇದನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸುವುದು ಸೇರಿದಂತೆ ಕಠಿಣ ಕ್ರಮವನ್ನು ಆಹ್ವಾನಿಸಬಹುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಸ್ಪಷ್ಟಪಡಿಸಿದೆ.

ದೇಶಾದ್ಯಂತ ಹೆಚ್ಚು ಸುಧಾರಿತ, ತಡೆರಹಿತ ಟೋಲಿಂಗ್ ವ್ಯವಸ್ಥೆಗಳನ್ನು ಜಾರಿಗೆ ತಂದಿರುವ ಸಲುವಾಗಿ ಫಾಸ್ಟ್‌ಟ್ಯಾಗ್ ಕ್ರಮವನ್ನು ಇನ್ನಷ್ಟು ಬಿಗಿಗೊಳಿಸಲಾಗುತ್ತಿದೆ. ಹೀಗಾಗಿ ವಿಂಡ್‌ಸ್ಕ್ರೀನ್‌ನಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಸರಿಯಾಗಿ ಅಂಟಿಸುವುದು ತಡೆರಹಿತ ಸ್ಕ್ಯಾನಿಂಗ್‌ಗೆ ನಿರ್ಣಾಯಕವಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button