ಮೇ 1ರಂದು `ಕುಟುಂಬ 2026′ ಕ್ರೀಡಾಕೂಟ ಉದ್ಘಾಟನೆ

ಕೊಡಗು ಗೌಡ ಯುವ ವೇದಿಕೆ (ರಿ) ಮಡಿಕೇರಿ ಹಾಗೂ ಗಾಳಿಬೀಡು ಗೌಡ ಜನಾಂಗ ಬಾಂಧವರ ಕೂಡುಕೂಟದಲ್ಲಿ `ಕುಟುಂಬ 2026′ ಕ್ರೀಡಾಕೂಟ ಉದ್ಘಾಟನೆ ಮೇ 1ರ ಶುಕ್ರವಾರ ಗಾಳಿಬೀಡು ಪ್ರೌಢ ಶಾಲಾ ಮೈದಾನದಲ್ಲಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ 10 ಕುಟುಂಬದ, 18 ಗೋತ್ರದ ಗೌಡ ಜನಾಂಗದವರು ಪಾಲ್ಗೊಳ್ಳಲಿದ್ದಾರೆ.
ಜೊತೆಗೆ ಮೇ 2 ರಿಂದ ಮೇ 16ರ ತನಕ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಕುಟುಂಬವಾರ್ ಕ್ರಿಕೆಟ್, ರಿಂಕ್ ಹಾಕಿ, ಕೇರಂ, ಮಿಸ್ಟರ್ ಗೌಡ ಹಾಗೂ ಮಿಸ್ ಗೌಡತಿ ಸ್ಪರ್ಧೆಯೂ ಆಯೋಜಿಸಲಾಗಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಗೌಡ ಯುವ ವೇದಿಕೆ ಮಡಿಕೇರಿ ಇದರ ಅಧ್ಯಕ್ಷರಾದ ಬಾಳಾಡಿ ಮನೋಜ್ ವಹಿಸಲಿದ್ದಾರೆ. ಸಮಾಜಸೇವಕಿ ದಂಬೆಕೋಡಿ ಕವನ ಭೀಷ್ಮ, ಜನಾಂಗದ ಹಿರಿಯವರಾದ ಕೋಳುಮುಡಿಯನ ಅನಂತ ಕುಮಾರ್ ದೀಪಬೆಳಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ಮ್ಯಾರಥಾನ್ ಓಟಗಾರರಾದ ಹೊಸೊಕ್ಲು ಚಿನ್ನಪ್ಪ ಹಾಗೂ ಕೋಚನ ತೇಜಸ್ ಗುಡ್ಡಗಾಡು ಓಟ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ, ಕೊಡಗು ಜಿಲ್ಲೆ ಕೊಡಗು ಗೌಡ ಸಮಾಜಗಳ ಒಕ್ಕೂಟ ಮಡಿಕೇರಿಯ ಅಧ್ಯಕ್ಷ ಆನಂದ ಕರಂದ್ಲಾಜೆ, ಉದ್ಯಮಿ ಕೇಕಡ ನಂದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.



