ಧುರಂಧರ್: ದಿ ರಿವೆಂಜ್ ಶೋಲೇ x 100 : ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆ
ರಣವೀರ್ ಸಿಂಗ್ ಅಭಿನಯದ ಧುರಂಧರ್: ದಿ ರಿವೆಂಜ್ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ನಡುವೆ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಸಿನಿಮಾವನ್ನು ಶೋಲೇ x 100 ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧುರಂದರ್ ಮೊದಲ ಭಾಗವನ್ನೂ ಹಲವು ಬಾರಿ ಹೊಗಲಿರುವ ರಾಮ್ಗೋಪಾಲ್ ವರ್ಮಾ ಎರಡನೇ ಭಾಗದ ಸಾಕಷ್ಟು ಅಂಶಗಳ ಬಗ್ಗೆ ಗಮನ ಸೆಳೆದಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಮ್ ಗೋಪಾಲ್ ವರ್ಮಾ, “ಹೊಸ ಸಿನಿಮೀಯ ಕ್ರಮದ ಜನನ” ಎಂದು ಕರೆದಿದ್ದಾರೆ. ಬರೀ ಅಷ್ಟೇ ಅಲ್ಲ, ಸ್ಟೀವನ್ ಸ್ಪೀಲ್ಬರ್ಗ್ ಮತ್ತು ಕ್ರಿಸ್ಟೋಫರ್ ನೋಲನ್ ಅವರಂತಹ ಹಿರಿಯ ಚಲನಚಿತ್ರ ನಿರ್ಮಾಪಕರನ್ನು “ಫಸ್ಟ್ ಡೇ, ಫಸ್ಟ್ ಶೋ” ನೋಡುವಂತೆಯೂ ಇವರು ಕಿವಿಮಾತು ಹೇಳಿದ್ದಾರೆ.
After last nights watch of #Dhurandhar2 in terms of it’s sheer cumulative impact in every which way , whether on it’s expected collections , audience euphoria , social influences , cinematic grammar breaking , and above all the psychological audio visual impact , it will be a…
— Ram Gopal Varma (@RGVzoomin) March 18, 2026
ರಣವೀರ್ ಸಿಂಗ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್ ಮಾಧವನ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ನಟಿಸಿರುವ ಧುರಂಧರ್ ಮೊದಲ ಭಾಗ ಈಗಾಗಲೇ ಗಳಿಕೆಯಲ್ಲಿ ಯಶಸ್ಸು ಸಾಧಿಸಿತ್ತು. ಈಗ ಇದರ ಎರಡನೇ ಭಾಗ ಧುರಂಧರ್: ದಿ ರಿವೆಂಜ್ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.



