Sandalwood

`ಧುರಂಧರ್-ದಿ ರಿವೇಂಜ್’ ಅದ್ಭುತ ಚಿತ್ರ : ಶಿವರಾಜ್ ಕುಮಾರ್ ಮೆಚ್ಚುಗೆ

ಬಾಲಿವುಡ್‍ನ ಸ್ಪೈ ಥ್ರಿಲ್ಲರ್ `ಧುರಂಧರ್-ದಿ ರಿವೇಂಜ್’ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಸಿನಿಲೋಕದ ಸಾಕಷ್ಟು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ಸಾಲಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡಾ ಸೇರಿದ್ದಾರೆ.


ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶಿವಣ್ಣ, ನಟ ರಣವೀರ್ ಸಿಂಗ್, ನಿರ್ದೇಶಕ ಆದಿತ್ಯ ಧರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. `ಧುರಂಧರ್: ದಿ ರಿವೆಂಜ್ ಅದ್ಭುತವಾಗಿದೆ! ಅದರ ಪ್ರತಿಯೊಂದು ಭಾಗವೂ ಇಷ್ಟವಾಯಿತು. ಈ ಚಿತ್ರದಲ್ಲಿ ರಣವೀರ್ ಸಿಂಗ್ ನಟನೆ ಅದ್ಭುತವಾಗಿದೆ ಹಾಗೂ ಶಾಶ್ವತ್ ಸಚ್‍ದೇವ್ ಅವರ ಸಂಗೀತಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ವಿಶೇಷವಾಗಿ ವಿಂಟೇಜ್ ಹಾಡುಗಳ ಬಳಕೆ ಶಾಶ್ವತವಾದ ಪ್ರಭಾವ ಬೀರುತ್ತದೆ. ಆದಿತ್ಯ ಧರ್ ಅವರ ದೃಢನಿಶ್ಚಯ ಮತ್ತು ಕೌಶಲ್ಯ ಮೆಚ್ಚುವಂತಹದ್ದು. ದೇಶಭಕ್ತಿಗಾಗಿ ಸೈನಿಕನೊಬ್ಬ ತೆಗೆದುಕೊಳ್ಳುವ ಶ್ರಮವೇ ಈ ಸಿನಿಮಾದ ಜೀವಾಳ’ ಎಂದು ಹೇಳಿಕೊಂಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button