ಹೊಸ ರೆನಾಲ್ಟ್ ಡಸ್ಟರ್ನ ಇಂಧನ ದಕ್ಷತೆ ಎಷ್ಟು? : ಇಲ್ಲಿದೆ ಡೀಟೇಲ್ಸ್

ರೆನಾಲ್ಟ್ ಇಂಡಿಯಾ ಇತ್ತೀಚೆಗಷ್ಟೇ ತನ್ನ ಹೊಸ ರೆನಾಲ್ಟ್ ಡಸ್ಟರ್ ಎಸ್ಯುವಿಯನ್ನು ಭಾರತದ ವಾಹನ ಮಾರುಕಟ್ಟೆಗೆ ಪರಿಚಯಿಸಿತ್ತು. ಇದೀಗ ಸಂಸ್ಥೆ 2026ರ ಹೊಸ ರೆನಾಲ್ಟ್ ಡಸ್ಟರ್ನ ಟರ್ಬೊ-ಪೆಟ್ರೋಲ್ ಸೆಟಪ್ನ ARAI- ಪ್ರಮಾಣೀಕೃತ ಇಂಧನ ದಕ್ಷತೆಯ ಅಂಕಿಅಂಶಗಳನ್ನು ಪ್ರಕಟಿಸಿದೆ.
160 ಎಂಜಿನ್ನಿಂದ ಶಕ್ತಿ ಪಡೆಯುವ ಈ ಮಧ್ಯಮ ಗಾತ್ರದ ಎಸ್ಯುವಿ ಡಿಸಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸಿನೊಂದಿಗೆ 18.45 kmpl ಮೈಲೇಜ್ ನೀಡುತ್ತದೆ. ಇನ್ನು 6-ಸ್ಪೀಡ್ ಟ್ರಾನ್ಸ್ಮಿಷನ್ನೊಂದಿಗೆ ಜೋಡಿಸಲಾದ ಮ್ಯಾನುವಲ್ ವೆರ್ಶನ್ 17.75 kmpl ಇಂಧನ ದಕ್ಷತೆಯನ್ನು ಒದಗಿಸುತ್ತದೆ.
1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 163 ಎಚ್ಪಿ ಶಕ್ತಿ ಹಾಗೂ 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೀಗಾಗಿ ಈ ವಿಭಾಗದಲ್ಲಿ ಇದು ಹೆಚ್ಚು ಶಕ್ತಿಶಾಲಿ ಆಯ್ಕೆಗಳಲ್ಲಿ ಒಂದಾಗಿದೆ. ಇದರ ಹೊರತಾಗಿ 1.0-ಲೀಟರ್ ತ್ರಿ-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆಯೂ ಈ ಎಸ್ಯುವಿ ಬರುತ್ತದೆ. ಈ ಯುನಿಟ್ 100 ಎಚ್ಪಿ ಶಕ್ತಿ ಹಾಗೂ 160 ಎನ್ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸಿನೊಂದಿಗೆ ಜೋಡಿಯಾಗಿ ಬರುತ್ತದೆ.
ಎಕ್ಸ್ ಶೋರೂಮ್ ಬೆಲೆಗೆ ಸಂಬಂಧಿಸಿದಂತೆ ಹೊಸ ಡಸ್ಟರ್ಗೆ 10.49 ಲಕ್ಷ ರೂಪಾಯಿಯಿಂದ 18.49 ಲಕ್ಷ ರೂಪಾಯಿ ತನಕ ಇದೆ.



