Sandalwood

`ಕೆಡಿ’ ದಿ ಡೆವಿಲ್‌ನಲ್ಲಿ ಕಿಚ್ಚ ಸುದೀಪ್ : ಪಾತ್ರದ ಫೋಟೋ ಹಂಚಿಕೊಂಡ ನಿರ್ದೇಶಕ ಪ್ರೇಮ್

ಜೋಗಿ ಪ್ರೇಮ್ ನಿರ್ದೇಶನದ `ಕೆಡಿ’ ದಿ ಡೆವಿಲ್ ಚಿತ್ರದಲ್ಲಿ ಕಿಚ್ಚ ಸುದೀಪ್‌ ಕೂಡಾ ಕಾಣಿಸಿಕೊಳ್ಳಲಿದಾರೆ. ಧ್ರುವ ಸರ್ಜಾ ಅಭಿನಯದ ಈ ಚಿತ್ರದಲ್ಲಿ ಸುದೀಪ್ ಅವರು ಕಾಲ ಭೈರವ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸುದೀಪ್ ಅವರ ಪಾತ್ರದ ಫೋಟೋವನ್ನು ಪ್ರೇಮ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

`ಕೆಲವು ಹೆಸರುಗಳು ಭಯ ಮೂಡಿಸುತ್ತವೆ. ಈ ಹೆಸರು ತಬ್ಬಿಬ್ಬಾಗಿಸುತ್ತದೆ. ಈ ಚಿತ್ರದಲ್ಲಿ ನನ್ನ ಡಾರ್ಲಿಂಗ್ ‘ಕಾಲ ಭೈರವ’ ಪಾತ್ರದಲ್ಲಿ ನಟಿಸಿದ್ದಾರೆ’ ಎಂದು ಪ್ರೇಮ್ ಬರೆದುಕೊಂಡಿದ್ದಾರೆ. ಪ್ರೇಮ್ ಹಂಚಿಕೊಂಡಿರುವ ಈ ಫೋಟೋದಲ್ಲಿ ಕಿಚ್ಚ ಸುದೀಪ್ ಅವರು ಹಿಮ್ಮುಖವಾಗಿ ನಿಂತಿರುವುದು ಕಾಣಿಸುತ್ತದೆ. ಕೈಯಲ್ಲಿ ರುದ್ರಾಕ್ಷಿ ಮಾಲೆ ಇದೆ.


‘ಕೆಡಿ’ ಚಿತ್ರದಲ್ಲಿ ಧ್ರುವ ಸರ್ಜಾ, ವಿ. ರವಿಚಂದ್ರನ್, ರಮೇಶ್ ಅರವಿಂದ್, ಕಿಚ್ಚ ಸುದೀಪ್, ರೀಷ್ಮಾ ನಾಣಯ್ಯ, ನೋರಾ ಫತೇಹಿ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಸೇರಿ ಹಲವು ಕಲಾವಿದರು ನಟಿಸಿದ್ದಾರೆ. ಈ ಬಹುನಿರೀಕ್ಷಿತ ಚಿತ್ರ 2026ರ ಏಪ್ರಿಲ್ 30ರಂದು ಬಿಡುಗಡೆಯಾಗಲಿದೆ.

Show More

Related Articles

Leave a Reply

Your email address will not be published. Required fields are marked *

Back to top button