`ಕೆಡಿ’ ದಿ ಡೆವಿಲ್ನಲ್ಲಿ ಕಿಚ್ಚ ಸುದೀಪ್ : ಪಾತ್ರದ ಫೋಟೋ ಹಂಚಿಕೊಂಡ ನಿರ್ದೇಶಕ ಪ್ರೇಮ್
ಜೋಗಿ ಪ್ರೇಮ್ ನಿರ್ದೇಶನದ `ಕೆಡಿ’ ದಿ ಡೆವಿಲ್ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡಾ ಕಾಣಿಸಿಕೊಳ್ಳಲಿದಾರೆ. ಧ್ರುವ ಸರ್ಜಾ ಅಭಿನಯದ ಈ ಚಿತ್ರದಲ್ಲಿ ಸುದೀಪ್ ಅವರು ಕಾಲ ಭೈರವ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸುದೀಪ್ ಅವರ ಪಾತ್ರದ ಫೋಟೋವನ್ನು ಪ್ರೇಮ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
`ಕೆಲವು ಹೆಸರುಗಳು ಭಯ ಮೂಡಿಸುತ್ತವೆ. ಈ ಹೆಸರು ತಬ್ಬಿಬ್ಬಾಗಿಸುತ್ತದೆ. ಈ ಚಿತ್ರದಲ್ಲಿ ನನ್ನ ಡಾರ್ಲಿಂಗ್ ‘ಕಾಲ ಭೈರವ’ ಪಾತ್ರದಲ್ಲಿ ನಟಿಸಿದ್ದಾರೆ’ ಎಂದು ಪ್ರೇಮ್ ಬರೆದುಕೊಂಡಿದ್ದಾರೆ. ಪ್ರೇಮ್ ಹಂಚಿಕೊಂಡಿರುವ ಈ ಫೋಟೋದಲ್ಲಿ ಕಿಚ್ಚ ಸುದೀಪ್ ಅವರು ಹಿಮ್ಮುಖವಾಗಿ ನಿಂತಿರುವುದು ಕಾಣಿಸುತ್ತದೆ. ಕೈಯಲ್ಲಿ ರುದ್ರಾಕ್ಷಿ ಮಾಲೆ ಇದೆ.
Some names create fear.
This name creates chaos.The name is KAALA BHAIRAVA. My darling @kicchasudeep 🔥
Happy Ramanavami… Jai Shree ram🕉️🛕🪷 ✨#kinkd #kdthedevil #prems… pic.twitter.com/kT8xeFgA5l
— PREM❣️S (@directorprems) March 26, 2026
‘ಕೆಡಿ’ ಚಿತ್ರದಲ್ಲಿ ಧ್ರುವ ಸರ್ಜಾ, ವಿ. ರವಿಚಂದ್ರನ್, ರಮೇಶ್ ಅರವಿಂದ್, ಕಿಚ್ಚ ಸುದೀಪ್, ರೀಷ್ಮಾ ನಾಣಯ್ಯ, ನೋರಾ ಫತೇಹಿ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಸೇರಿ ಹಲವು ಕಲಾವಿದರು ನಟಿಸಿದ್ದಾರೆ. ಈ ಬಹುನಿರೀಕ್ಷಿತ ಚಿತ್ರ 2026ರ ಏಪ್ರಿಲ್ 30ರಂದು ಬಿಡುಗಡೆಯಾಗಲಿದೆ.



