Bollywood

ಚಿತ್ರವಾಗಿ ಬರುತ್ತಿದೆ `ಆಪರೇಷನ್ ಸಿಂದೂರ್’ : ಯಾರು ಡೈರೆಕ್ಟರ್?

ಭಾರತೀಯ ವೀರನ ಕಥಾ ಹಂದರ ಹೊಂದಿರುವ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆಯುತ್ತಿದೆ. ಈ ನಡುವೆ ಭಾರತೀಯ ಸೈನ್ಯದ ಸಾಹಸಗಾಥೆಯುಳ್ಳ ಮತ್ತೊಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಅದೇ `ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಕಥೆಯನ್ನು ಆಧರಿಸಿದ ಚಿತ್ರ. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯನ್ನೇ ಆಧಾರವಾಗಿಟ್ಟುಕೊಂಡು ‘ದಿ ಕಾಶ್ಮೀರ್ ಫೈಲ್ಸ್’ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ನಿರ್ಮಾಪಕ ಭೂಷಣ್ ಕುಮಾರ್ ಚಿತ್ರ ಸಿದ್ಧಪಡಿಸಲು ಸಜ್ಜಾಗಿದ್ದಾರೆ


ಲಭ್ಯ ಮಾಹಿತಿ ಪ್ರಕಾರ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ‘ಟೈನಿ’ ಧಿಲ್ಲೋನ್ ಅವರ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರ ತಯಾರಾಗಲಿದೆ. ಶೀಘ್ರ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯೂ ಇದೆ. ಇದನ್ನು ಕೇವಲ ಸಿನಿಮಾ ಅಲ್ಲ, ಇದು ದೇಶದ ಶೌರ್ಯವನ್ನು ದಾಖಲಿಸುವ ಪ್ರಯತ್ನ ಎಂದು ಚಿತ್ರತಂಡ ಹೇಳಿದೆ.

Show More

Related Articles

Leave a Reply

Your email address will not be published. Required fields are marked *

Back to top button