ಶಾರೂಖ್ ಖಾನ್ಗೂ ತಟ್ಟಿದ ಯುದ್ಧದ ಬಿಸಿ : ಶೂಟಿಂಗ್ ಲೋಕೇಷನ್ ದುಬೈನಿಂದ ಶಿಫ್ಟ್!
ಮಧ್ಯ ಪ್ರಾಚ್ಯ ಸಂಘರ್ಷದ ಬಿಸಿ ಬಾಲಿವುಡ್ ನಟ ಶಾರೂಖ್ ಖಾನ್ಗೂ ತಟ್ಟಿದೆ. ಹೀಗಾಗಿ ದುಬೈನಲ್ಲಿ ನಡೆಯಬೇಕಾದ ಶೂಟಿಂಗ್ ಈಗ ಮುಂಬೈಗೆ ಶಿಫ್ಟ್ ಆಗಿದೆ.
ಶಾರೂಖ್ ಖಾನ್ ಅಭಿನಯದ ಕಿಂಗ್ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಹಿಂದಿ ಚಿತ್ರಗಳಲ್ಲಿ ಒಂದಾಗಿದೆ. ಡಿಸೆಂಬರ್ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ನಡುವೆ ದುಬೈನಲ್ಲಿ ನಿಗದಿಯಾಗಿದ್ದ ಶೂಟಿಂಗ್ಗೆ ಯುದ್ಧದ ಎಫೆಕ್ಟ್ ತಟ್ಟಿದೆ. ಏಪ್ರಿಲ್ನಲ್ಲಿ ಈ ಚಿತ್ರದ ಪ್ರಮುಖ ಫೈಟಿಂಗ್ ಸೀನ್ನ ದೃಶ್ಯವನ್ನು ದುಬೈನಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿತ್ತು. ಆದರೆ ಈ ಯುದ್ಧದ ಕಾರಣಗಳಿಂದ ದುಬೈನ ಶೂಟಿಂಗ್ ರದ್ದು ಮಾಡಿ, ಮುಂಬೈನಲ್ಲಿ ಸ್ಟುಡಿಯೋದಲ್ಲಿ ಮರುಭೂಮಿಯ ಹಿನ್ನೆಲೆಯಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ.
ಸುಹಾನಾ ಮತ್ತು ಅನಿಲ್ ಕಪೂರ್ ಮರುಭೂಮಿಯ ಹಿನ್ನೆಲೆಯಲ್ಲಿ ನಡೆಯಲಿರುವ ಈ ಸಾಹಸ ದೃಶ್ಯದ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಶಾರೂಖ್, ಅನಿಲ್ ಮತ್ತು ಸುಹಾನಾ ಜೊತೆಗೆ, ಜಾಕಿ ಶ್ರಾಫ್, ಸೌರಭ್ ಶುಕ್ಲಾ, ಅಭಯ್ ವರ್ಮಾ, ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ಜೈದೀಪ್ ಅಹ್ಲಾವತ್, ರಾಘವ್ ಜುಯಾಲ್, ಅಕ್ಷಯ್ ಒಬೆರಾಯ್ ಮತ್ತು ಅರ್ಷದ್ ವಾರ್ಸಿ ಸೇರಿದಂತೆ ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ. ಜೊತೆಗೆ ಅಭಿಷೇಕ್ ಬಚ್ಚನ್ ಮುಖ್ಯ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.



