Sandalwood
ಮುಂಬೈನಲ್ಲಿ ಪ್ರೀಮಿಯಂ ಅಪಾರ್ಟ್ಮೆಂಟ್ ಖರೀದಿಸಿದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ : ಬೆಲೆ ಎಷ್ಟು ಕೋಟಿ ಗೊತ್ತಾ?
ಬಹುಭಾಷಾ ಗಾಯಕಿ, ಕನ್ನಡದಲ್ಲೂ ಹಲವು ಹಾಡುಗಳಿಗೆ ಧ್ವನಿಯಾಗಿದ್ದ ಶ್ರೇಯಾ ಘೋಷಾಲ್ ಮುಂಬೈಯಲ್ಲಿ ಪ್ರೀಮಿಯಂ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಮುಂಬೈನ ವರ್ಲಿಯಲ್ಲಿ ಇವರು ಈ ಅಪಾರ್ಟ್ಮೆಂಟ್ ಖರೀದಿಸಿದ್ದು, ಇದರ ಮೌಲ್ಯ ಬರೋಬ್ಬರಿ 29.70 ಕೋಟಿ ರೂಪಾಯಿ ಆಗಿದೆ. ತಮ್ಮ ಪೋಷಕರು ಶಮಿಷ್ಠ ಘೋಷಾಲ್ ಮತ್ತು ಬಿಸ್ವಜಿತ್ ಘೋಷಾಲ್ ಅವರೊಂದಿಗೆ ಶ್ರೇಯಾ ಈ ಆಸ್ತಿ ಖರೀದಿ ಮಾಡಿದ್ದಾರೆ. ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಅಪಾರ್ಟ್ಮೆಂಟ್ ವರ್ಲಿಯ ಗೋದ್ರೇಜ್ ಟ್ರೈಲಾಜಿಯಲ್ಲಿದೆ.
ಈ ಮನೆ 2,430.06 ಚದರ ಅಡಿ ಕಾರ್ಪೆಟ್ ಪ್ರದೇಶವನ್ನು ಮತ್ತು ಒಟ್ಟು 2,750.28 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಜೊತೆಗೆ ಮೂರು ಮೀಸಲಾದ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಮಧ್ಯ ಮುಂಬೈನಲ್ಲಿರುವ ವರ್ಲಿ ಐಷಾರಾಮಿ ರಿಯಲ್ ಎಸ್ಟೇಟ್ಗೆ ಪ್ರಮುಖ ತಾಣವಾಗಿ ಹೊರಹೊಮ್ಮಿದೆ.



