Sandalwood

ಮುಂಬೈನಲ್ಲಿ ಪ್ರೀಮಿಯಂ ಅಪಾರ್ಟ್‌ಮೆಂಟ್ ಖರೀದಿಸಿದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ : ಬೆಲೆ ಎಷ್ಟು ಕೋಟಿ ಗೊತ್ತಾ?

ಬಹುಭಾಷಾ ಗಾಯಕಿ, ಕನ್ನಡದಲ್ಲೂ ಹಲವು ಹಾಡುಗಳಿಗೆ ಧ್ವನಿಯಾಗಿದ್ದ ಶ್ರೇಯಾ ಘೋಷಾಲ್ ಮುಂಬೈಯಲ್ಲಿ ಪ್ರೀಮಿಯಂ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಮುಂಬೈನ ವರ್ಲಿಯಲ್ಲಿ ಇವರು ಈ ಅಪಾರ್ಟ್‌ಮೆಂಟ್ ಖರೀದಿಸಿದ್ದು, ಇದರ ಮೌಲ್ಯ ಬರೋಬ್ಬರಿ 29.70 ಕೋಟಿ ರೂಪಾಯಿ ಆಗಿದೆ. ತಮ್ಮ ಪೋಷಕರು ಶಮಿಷ್ಠ ಘೋಷಾಲ್ ಮತ್ತು ಬಿಸ್ವಜಿತ್ ಘೋಷಾಲ್ ಅವರೊಂದಿಗೆ ಶ್ರೇಯಾ ಈ ಆಸ್ತಿ ಖರೀದಿ ಮಾಡಿದ್ದಾರೆ. ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಅಪಾರ್ಟ್ಮೆಂಟ್ ವರ್ಲಿಯ ಗೋದ್ರೇಜ್ ಟ್ರೈಲಾಜಿಯಲ್ಲಿದೆ.

ಈ ಮನೆ 2,430.06 ಚದರ ಅಡಿ ಕಾರ್ಪೆಟ್ ಪ್ರದೇಶವನ್ನು ಮತ್ತು ಒಟ್ಟು 2,750.28 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಜೊತೆಗೆ ಮೂರು ಮೀಸಲಾದ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಮಧ್ಯ ಮುಂಬೈನಲ್ಲಿರುವ ವರ್ಲಿ ಐಷಾರಾಮಿ ರಿಯಲ್ ಎಸ್ಟೇಟ್‌ಗೆ ಪ್ರಮುಖ ತಾಣವಾಗಿ ಹೊರಹೊಮ್ಮಿದೆ.

Show More

Related Articles

Leave a Reply

Your email address will not be published. Required fields are marked *

Back to top button