Tollywood
ಏಪ್ರಿಲ್ 8 ರಂದು ಘೋಷಣೆಯಾಗಲಿದೆ ಅಲ್ಲು ಅರ್ಜುನ್-ಅಟ್ಲೀ ಕಾಂಬಿನೇಷನ್‌ನ ಚಿತ್ರದ ಟೈಟಲ್
ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲೀ ಕಾಂಬಿನೇಷನ್‌ನ ಚಿತ್ರ ಬಹುನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘AA22xA6’ ಎಂದು ಹೆಸರಿಡಲಾಗಿದ್ದು, ಈ ಚಿತ್ರದ ಹೆಸರು ಅಲ್ಲು ಅರ್ಜುನ್ ಹುಟ್ಟುಹಬ್ಬವಾದ ಏಪ್ರಿಲ್ 8 ರಂದು ಘೋಷಣೆಯಾಗಲಿದೆ. ಇದು ಕೂಡಾ ಅತಿ ದೊಡ್ಡ ಪ್ಯಾನ್ ಇಂಡಿಯಾ ಚಿತ್ರವಾಗುವ ನಿರೀಕ್ಷೆ ಇದೆ.
Title Poster tomorrow at 11 AM.#AA22xA6 pic.twitter.com/3do0GyDiFj
— Allu Arjun (@alluarjun) April 7, 2026
ಇದು ಅಲ್ಲು ಅರ್ಜುನ್ ಮತ್ತು ಅಟ್ಲೀ ಜೊತೆಯಾಗಿ ಮಾಡುತ್ತಿರುವ ಮೊದಲ ಪ್ರಾಜೆಕ್ಟ್ ಆಗಿದ್ದು, ಸಹಜವಾಗಿಯೇ ಈ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಸದ್ಯ ಬಿಡುಗಡೆಯಾಗಿರುವ ‘AA22xA6’ ಶೀರ್ಷಿಕೆ ಘೋಷಣೆಯ ಪೋಸ್ಟರ್ ಒಂದು ನಿಗೂಢ ಮತ್ತು ತೀವ್ರವಾದ ಥೀಮ್ ಅನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದಾರೆ.



