Sandalwood

`ಅಮೆರಿಕಾ ಅಮೆರಿಕಾ’ ಚಿತ್ರಕ್ಕೆ ತುಂಬಿತು 30 ವರ್ಷ

ನಾಗತೀಹಳ್ಳಿ ಚಂದ್ರಶೇಖರ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ `ಅಮೆರಿಕಾ ಅಮೆರಿಕಾ’ಕ್ಕೆ 30 ವರ್ಷದ ಸಂಭ್ರಮ. 1997ರ ಏಪ್ರಿಲ್ 11ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಅಂದು ಚಿತ್ರರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ಈ ಚಿತ್ರದ ಹಾಡುಗಳು ಇಂದಿಗೂ ಚಿತ್ರರಸಿಕರ ಬಾಯಿಯಲ್ಲಿ ಗುನುಗುತ್ತಿರುತ್ತದೆ.

ಹೀಗೆ ಈ ಚಿತ್ರಕ್ಕೆ 30 ವರ್ಷ ತುಂಬಿದ ಖುಷಿಯಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತನ್ನ ಇನ್‍ಸ್ಟಾಗ್ರಾಂ ಪೋಸ್ಟ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. `ನಾನು ರೂಪಿಸಿದ್ದಲ್ಲ; ನನ್ನನ್ನೇ ರೂಪಿಸಿದ ಸಿನಿಮಾ! ಕೋಟಿ ಕೋಟಿ ಕಂಗಳಿಗೆ ಕನಸು ಕೊಟ್ಟ ಸಿನಿಮಾ. ಕೋಟಿ ಕೋಟಿ ಮನಗಳಿಗೆ ಮಮಕಾರವಿತ್ತ ಸಿನಿಮಾ. ಕನ್ನಡ ಜನತೆಗೆ ಕೋಟಿ ಕೋಟಿ ಕೃತಜ್ಞತೆಗಳು. ಬಿಡುಗಡೆಯಾದ ದಿನಾಂಕಃ 11-04-1997′ ಇದು ಇವರು ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ನೊಂದಿಗೆ ಹಂಚಿಕೊಂಡಿರುವ ಫೋಟೋದಲ್ಲಿ `ಸದ್ಯದಲ್ಲೇ ನಿಮ್ಮೆದುರು ಅಮೆರಿಕಾ ಅಮೆರಿಕಾ 2′ ಎಂಬ ಬರಹ ಇದ್ದು, ಇದು ಇನ್ನಷ್ಟು ಕುತೂಹಲ ಮೂಡಿಸಿದೆ.


ರಮೇಶ್ ಅರವಿಂದ್, ಹೇಮಾ ಪ್ರಭಾತ್, ಅಕ್ಷಯ್ ಆನಂದ್, ದತ್ತಣ್ಣ, ವೈಶಾಲಿ ಕಾಸರವಳ್ಳಿ ಸೇರಿ ಅನೇಕರು ಈ ಸಿನಿಮಾದಲ್ಲಿ ಅಭಿನಯಿಸಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button