`ಅಮೆರಿಕಾ ಅಮೆರಿಕಾ’ ಚಿತ್ರಕ್ಕೆ ತುಂಬಿತು 30 ವರ್ಷ
ನಾಗತೀಹಳ್ಳಿ ಚಂದ್ರಶೇಖರ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ `ಅಮೆರಿಕಾ ಅಮೆರಿಕಾ’ಕ್ಕೆ 30 ವರ್ಷದ ಸಂಭ್ರಮ. 1997ರ ಏಪ್ರಿಲ್ 11ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಅಂದು ಚಿತ್ರರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ಈ ಚಿತ್ರದ ಹಾಡುಗಳು ಇಂದಿಗೂ ಚಿತ್ರರಸಿಕರ ಬಾಯಿಯಲ್ಲಿ ಗುನುಗುತ್ತಿರುತ್ತದೆ.
ಹೀಗೆ ಈ ಚಿತ್ರಕ್ಕೆ 30 ವರ್ಷ ತುಂಬಿದ ಖುಷಿಯಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತನ್ನ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. `ನಾನು ರೂಪಿಸಿದ್ದಲ್ಲ; ನನ್ನನ್ನೇ ರೂಪಿಸಿದ ಸಿನಿಮಾ! ಕೋಟಿ ಕೋಟಿ ಕಂಗಳಿಗೆ ಕನಸು ಕೊಟ್ಟ ಸಿನಿಮಾ. ಕೋಟಿ ಕೋಟಿ ಮನಗಳಿಗೆ ಮಮಕಾರವಿತ್ತ ಸಿನಿಮಾ. ಕನ್ನಡ ಜನತೆಗೆ ಕೋಟಿ ಕೋಟಿ ಕೃತಜ್ಞತೆಗಳು. ಬಿಡುಗಡೆಯಾದ ದಿನಾಂಕಃ 11-04-1997′ ಇದು ಇವರು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ನೊಂದಿಗೆ ಹಂಚಿಕೊಂಡಿರುವ ಫೋಟೋದಲ್ಲಿ `ಸದ್ಯದಲ್ಲೇ ನಿಮ್ಮೆದುರು ಅಮೆರಿಕಾ ಅಮೆರಿಕಾ 2′ ಎಂಬ ಬರಹ ಇದ್ದು, ಇದು ಇನ್ನಷ್ಟು ಕುತೂಹಲ ಮೂಡಿಸಿದೆ.
View this post on Instagram
View this post on Instagram
ರಮೇಶ್ ಅರವಿಂದ್, ಹೇಮಾ ಪ್ರಭಾತ್, ಅಕ್ಷಯ್ ಆನಂದ್, ದತ್ತಣ್ಣ, ವೈಶಾಲಿ ಕಾಸರವಳ್ಳಿ ಸೇರಿ ಅನೇಕರು ಈ ಸಿನಿಮಾದಲ್ಲಿ ಅಭಿನಯಿಸಿದ್ದರು.



