ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದ ಧುರಂಧರ್ ಬೆಡಗಿ ಸಾರಾ ಅರ್ಜುನ್
ಧುರಂಧರ್ ಚಿತ್ರದ ಮೂಲಕ ಮನೆಮಾತಾಗಿರುವ ನಟಿ ಸಾರಾ ಅರ್ಜುನ್ ಶನಿವಾರ ಉಜ್ಜಯಿನಿಯ ಶ್ರೀಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪವಿತ್ರ ಭಸ್ಮ ಆರತಿ ಪೂಜೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕ್ಷಣವನ್ನು ವಿವರಿಸಲು ಪದಗಳೇ ಇಲ್ಲ ಎಂದು ಸಾರಾ ಅರ್ಜುನ್ ಹೇಳಿಕೊಂಡಿದ್ದಾರೆ.
#WATCH | After attending Bhasma Aarti, actor Sara Arjun says, “I have no words. I had the calling, and then I came here. There is no better feeling than this in this world. I am overjoyed…” https://t.co/5vHVwh2JVT pic.twitter.com/V9qZYNhB3B
— ANI (@ANI) April 11, 2026
ಭಸ್ಮ ಆರತಿ ಮಹಾಕಾಳ ದೇವಸ್ಥಾನದ ಅತ್ಯಂತ ಪವಿತ್ರ ಆಚರಣೆಗಳಲ್ಲಿ ಒಂದಾಗಿದೆ. ಬ್ರಹ್ಮಮುಹೂರ್ತದ ಸಮಯದಲ್ಲಿ ಅಂದರೆ ಬೆಳಗಿನ ಜಾವ 3:30 ರಿಂದ 5:30ರ ನಡುವೆ ಈ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸಾಕಷ್ಟು ಭಕ್ತರು ಹಾಜರಿರುತ್ತಾರೆ.
ಶಿವ ದೇವರಿಗೆ ಅರ್ಪಿತವಾದ ಮಹಾಕಾಳೇಶ್ವರ ದೇವಸ್ಥಾನ ಈಶ್ವರನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.



